Home » Free Bus: ಯುವಕರಿಗೂ ‘ಫ್ರೀ ಬಸ್’ ಟಿಕೆಟ್ ಕೊಟ್ಟು ಯಾಮಾರಿಸಿದ ಕಂಡಕ್ಟರ್- ಮುಂದೇನಾಯ್ತು?

Free Bus: ಯುವಕರಿಗೂ ‘ಫ್ರೀ ಬಸ್’ ಟಿಕೆಟ್ ಕೊಟ್ಟು ಯಾಮಾರಿಸಿದ ಕಂಡಕ್ಟರ್- ಮುಂದೇನಾಯ್ತು?

0 comments

Free Bus: ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ(Shakthi Yojane) ಯನ್ನು ಜಾರಿಗೊಳಿಸಿದೆ. ಇದಕ್ಕೆ ಒಂದು ವರ್ಷ ಕೂಡ ಆಗಿದೆ. ಆದರೆ ಈ ಯೋಜನೆ ದುರ್ಬಳಕೆ ಆಗುತ್ತಿರುವಂತಹ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಅಂತದ್ದೇ ಒಂದ ಪ್ರಕರಣ ಬೆಳಕಿಗೆ ಬಂದಿದ್ದು, ಕಂಡಕ್ಟರ್ ಒಬ್ಬ ಯುವಕರಿಗೆ ಫ್ರೀ ಬಸ್ ಟಿಕೆಟ್ ನೀಡಿ ಯಾಮಾರಿಸಿದ್ದಾನೆ.

ಹೌದು, ಮೈಸೂರಿನಿಂದ – ಚಾಮರಾಜನಗರಕ್ಕೆ (Mysore-Chamarajanagar) ಬರುತ್ತಿದ್ದ ಬಸ್‌ನಲ್ಲಿ ಕಂಡಕ್ಟರ್, ಬೇಡರಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಸವರಾಜ್ ಮತ್ತಿತ್ತರ ಸ್ನೇಹಿತರಿಂದ ಹಣ ಪಡೆದು ಶಕ್ತಿ ಯೋಜನೆ ಟಿಕೆಟ್ ಕೊಟ್ಟಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಅವಾಜ್ ಹಾಕಿದ್ದಾನೆ.

ಇದು ಮಾತ್ರವಲ್ಲದೆ ಬೇರೆ ಸಹ ಪ್ರಯಾಣಿಕರಿಗೂ ಕಂಡಕ್ಟರ್ ಟಿಕೆಟ್ ಕೊಟ್ಟು ಯಾಮಾರಿಸಿದ್ದು, ಕಂಡಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಟಿಕೆಟ್ ಸಮೇತ ವಿದ್ಯಾರ್ಥಿಗಳು ದೂರು ಕೊಟ್ಟಿದ್ದಾರೆ. ದೂರು ದಾಖಲಿಸಿಕೊಂಡಿರುವ ಚಾಮರಾಜನಗರ ಡಿಪೊ ಮ್ಯಾನೇಜರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

You may also like

Leave a Comment