Home » ಕಾಮಸೂತ್ರದಲ್ಲಿರುವ ಭಂಗಿಗಳಿಗಿಂತಲೂ ಹೆಚ್ಚಿನ ಸ್ಥಾನ ಪಲ್ಲಟ ಕಂಡ ಕನ್ಸರ್ವೇಟಿವ್ ಪಕ್ಷ

ಕಾಮಸೂತ್ರದಲ್ಲಿರುವ ಭಂಗಿಗಳಿಗಿಂತಲೂ ಹೆಚ್ಚಿನ ಸ್ಥಾನ ಪಲ್ಲಟ ಕಂಡ ಕನ್ಸರ್ವೇಟಿವ್ ಪಕ್ಷ

0 comments

ಲಂಡನ್: ಬ್ರಿಟನ್ ಸಂಸತ್ತಿನಲ್ಲಿ ನಡೆದ ಬಿರುಸಿನ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಪ್ರತಿಪಕ್ಷ ಕನ್ನರ್ವೇಟಿವ್ ಪಾರ್ಟಿಯನ್ನು “ಆ ಪಕ್ಷವು ಕಳೆದ 14 ವರ್ಷಗಳಲ್ಲಿ ಕಾಮಸೂತ್ರದಲ್ಲಿರುವ ಗಿಂತಲೂ ಹೆಚ್ಚಿನ ಸ್ಥಾನ ಪಲ್ಲಟಗಳನ್ನು ಕಂಡಿದೆ.” ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

ಕಾರ್ಮಿಕರಿಗೆ ಕಡ್ಡಾಯವಾಗಿ ಡಿಜಿಟಲ್‌ ಐಡಿ ಕಾರ್ಡ್ಗಳನ್ನು ನೀಡುವ ಯೋಜನೆ ಕೈಬಿಟ್ಟಿದ್ದಕ್ಕೆ ಪ್ರತಿಪಕ್ಷಗಳ ಟೀಕೆಯ ನಡುವೆಯೂ ಅದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಸ್ಟಾರ್ಮರ್ ಪ್ರತಿಪಕ್ಷವನ್ನು ಈ ರೀತಿಯಾಗಿ ಅಪಹಾಸ್ಯ ಮಾಡಿದ್ದಾರೆ.

ಸ್ಟಾರ್ಮರ್ ಹಿಂದಿನ ಕನ್ಸರ್ವೇಟಿವ್‌ ಪಕ್ಷದ ಸರಕಾರವನ್ನು ಗುರಿಯಾಗಿಟ್ಟು ಚರ್ಚೆಯನ್ನು ಬಳಸಿಕೊಂಡರು. ಆಗಾಗ್ಗೆ ನಾಯಕತ್ವ ಬದಲಾವಣೆಗಳು ಮತ್ತು ಸಚಿವ ಸಂಪುಟ ಪುನಾರಚನೆಯನ್ನು ಪ್ರಸ್ತಾಪಿಸಿ, ‘ಕಳೆದ 14 ವರ್ಷಗಳಲ್ಲಿ ಆ ಪಕ್ಷವು ಐದು ಪ್ರಧಾನಿಗಳು, ಅರು ಚಾನ್ಸೆಲರ್ ಗಳು, ಎಂಟು ಗೃಹ ಕಾರ್ಯದರ್ಶಿಗಳು ಮತ್ತು 16 ವಸತಿ ಸಚಿವರನ್ನು ಕಂಡಿದೆ,” ಎಂದರು. ಇದೇ ಮಾತಿನ ಭರದಲ್ಲಿ ಸ್ಟಾರ್ಮರ್, “ಆ ಪಕ್ಷವು ಕಳೆದ 14 ವರ್ಷಗಳಲ್ಲಿ ಕಾಮಸೂತ್ರದಲ್ಲಿರುವ ಭಂಗಿಗಳಿಗಿಂತಲೂ ಹೆಚ್ಚಿನ ಸ್ಥಾನ ಪಲ್ಲಟಗಳನ್ನು ಕಂಡಿದೆ ಎಂದು ಲೇವಡಿ ಮಾಡಿದರು.

You may also like