Crime: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬಾಚುಪಲ್ಲಿಯಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿಸಿದ ಅಪರಿಚಿತ ಮಹಿಳೆಯ ಕೊಳೆತ ಶವ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ವಿಜಯದುರ್ಗಾ ಮಾಲೀಕರ ಸಂಘದ ಕಾಲೋನಿಯ ರೆಡ್ಡಿ ಲ್ಯಾಬ್‌ನ ಗೋಡೆಯ ಬಳಿ 25ರಿಂದ 35 ವರ್ಷ ವಯಸ್ಸಿನ ಮಹಿಳೆಯ ಹೆಣ ಪತ್ತೆಯಾಗಿದೆ. ಈ ಜಾಗದಲ್ಲಿ ಕಡುಗೆಂಪು ಬಣ್ಣದ ಸೂಟ್‌ಕೇಸ್‌ನಲ್ಲಿ ದುರ್ವಾಸನೆ ಬರುತ್ತಿದೆ ಎಂಬುದರ ಬಗ್ಗೆ ಬುಧವಾರ ಜೂ 4 ರಂದು ಮಧ್ಯಾಹ್ನ ಮಾಹಿತಿ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸೂಟ್‌ಕೇಸ್ ಅನ್ನು ಪರಿಶೀಲಿಸಿದಾಗ, ಕೆಂಪು ಸೂಟ್ ಧರಿಸಿದ ಮಹಿಳೆಯ ಶವ ಪತ್ತೆಯಾಗಿದೆ. ಕೊಲೆ 10ರಿಂದ 12 ದಿನಗಳ ಹಿಂದೆ ನಡೆದಿರಬಹುದು ಎಂದು ಶಂಕಿ ಸಲಾಗಿದೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಯಾರೋ ಆಕೆಯನ್ನು ಬೇರೆಡೆ ಕೊಂದು ಇಲ್ಲಿ ಎಸೆದಿರುವಂತೆ ತೋರುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
