1
Death: ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ವಾಸವಿದ್ದ ನಿವಾಸಿ ಆಟೋ (ಭಾವ) ಮಂಜುನಾಥ್ (50) ಪ್ರತಿನಿತ್ಯ ಆಟೋದಲ್ಲೇ ಮಲಗಿ, ಆಟೋ ನಿಲ್ದಾಣದಲ್ಲಿ ರಾತ್ರಿ ಕಳೆಯುತ್ತಿದ್ದರು. ನಿನ್ನೆಯೂ ಸಹ ಆಟೋದಲ್ಲೇ ಮಲಗಿದ್ದರು. ಬೆಳಗ್ಗೆ ಇತರೆ ಆಟೋದವರು ಬಂದು ನೋಡಿದಾಗ ಆಟೋದಲ್ಲೇ ಪ್ರಾಣ (Death) ಬಿಟ್ಟಿರುವ ವಿಷಯ ತಿಳಿದು ಬಂದಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮೃತರು ಕಳೆದ 15 ವರ್ಷಕ್ಕೂ ಹೆಚ್ಚು ಕಾಲ ಇದೆ ವೃತ್ತಿಯಲ್ಲಿ ಇದ್ದರು. ಆದರೆ ವಿವಾಹ ನಂತರ ಮನೆಯಲ್ಲಿ ಮನಸ್ತಾಪದಿಂದ
ಕುಟುಂಬದಿಂದ ದೂರ ಉಳಿದಿದ್ದರು ಎನ್ನಲಾಗಿದೆ.
