3
Fire: ಕುಡಿದ ನಶೆಯಲ್ಲಿದ್ದ ವ್ಯಕ್ತಿಯೋರ್ವ ತನ್ನ ಮನೆಗೆ ತಾನೇ ಬೆಂಕಿಯಿಟ್ಟ ಘಟನೆ ನಡೆದಿದೆ. ಗುರು ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಮನೆಯವರ ಜೊತೆ ಗಲಾಟೆ ಮಾಡಿದ್ದು, ಬೀಡಿ ಸೇದಿ ಬೀಡಿಯನ್ನು ಬೆಡ್ ಮೇಲೆ ಇಟ್ಟಿದ್ದ.
ಇದರಿಂದ ಮನೆಯಿಡೀ ಬೆಂಕಿ ಆವರಿಸಿದೆ. ಮನೆ ಮಂದಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಹಾಸಿಗೆಗೆ ಹತ್ತಿಕೊಂಡ ಬೆಂಕಿ ಇಡೀ ಮನೆಯನ್ನು ಸುಟ್ಟು ಭಸ್ಮ ಮಾಡಿದೆ.
ಮನೆಯಲ್ಲಿದ್ದ ಬಟ್ಟೆ, ದವಸ, ಧಾನ್ಯ, ಗೃಹಪಯೋಗಿ ವಸ್ತುಗಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
