MP: ಆಸ್ಪತ್ರೆಯಲ್ಲಿ ಎಲ್ಲರೆದುರೇ ಯುವಕನೊಬ್ಬ ವಿದ್ಯಾರ್ಥಿನಿ ಮೈಮೇಲೆ ಹತ್ತಿ ಕುಳಿತು ಆಕೆಯ ಕತ್ತು ಸೀಳಿ ಕೊಲೆ(Murder) ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಹೌದು, ಆಸ್ಪತ್ರೆಗೆ ನುಗ್ಗಿದ ಯುವಕನೊಬ್ಬ, ಜನರ ನಡುವೆಯೇ 19 ವರ್ಷದ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಭಿಷೇಕ್ ಕೋಸ್ತಿ ಎಂಬಾತ ಸಾರ್ವಜನಿಕವಾಗಿಯೇ ಸಂಧ್ಯಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಭೀಕರ ಘಟನೆ ಜೂನ್ 27ರಂದು ಮಧ್ಯಪ್ರದೇಶದ ನರಸಿಂಗಪುರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಸಂಧ್ಯಾ ಚೌಧರಿ ಎಂದು ಗುರುತಿಸಲಾಗಿದೆ. ಈಕೆ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ಆಸ್ಪತ್ರೆ ಆವರಣದಲ್ಲಿ ನೂರಾರು ಜನರ ಸಮ್ಮುಖದಲ್ಲಿ ಆರೋಪಿ ಅಭಿಷೇಕ್ ಕೋಶ್ಟಿ ವಿದ್ಯಾರ್ಥಿನಿಯ ಕುತ್ತಿಗೆಯನ್ನು ಸೀಳುತ್ತಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಆರೋಪಿ ಸುಮಾರು 10 ನಿಮಿಷ ಸಂಧ್ಯಾ ಮೇಲೆ ಹಿಗ್ಗಾಮುಗ್ಗಾವಾಗಿ ಹಲ್ಲೆ ಮಾಡಿದ್ದಾನೆ. ಆ ಬಳಿಕ ಕೊ*ಲೆ ಮಾಡಿದ್ದಾನೆ. ಕೃತ್ಯ ನಡೆದ ಬಳಿಕ ತಾನೂ ಚಾಕುವಿನಿಂದ ಕತ್ತು ಕೊಯ್ದು ಆತ್ಮಹ*ತ್ಯೆಗೆ ಯತ್ನಿಸಿದ್ದಾನೆ. ಆ ನಂತರ ಆಸ್ಪತ್ರೆಯಿಂದ ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿ ಪರಾರಿ ಆಗಿದ್ದಾನೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Dakshina kannada: ಮರಳು, ಕೆಂಪುಕಲ್ಲು ಗಣಿಗಾರಿಕೆಗೆ ಕಾನೂನು ರೀತಿಯಲ್ಲಿ ಅವಕಾಶ: ದಿನೇಶ್ ಗುಂಡೂರಾವ್!
