Home » Farmer: ಎತ್ತುಗಳ ಮೈ ತೊಳೆಯಲು ನದಿಗೆ ಹೋದ ರೈತ – ಎಳೆದೊಯ್ದ ಮೊಸಳೆ – ಮುಂದೆನಾಯ್ತು?

Farmer: ಎತ್ತುಗಳ ಮೈ ತೊಳೆಯಲು ನದಿಗೆ ಹೋದ ರೈತ – ಎಳೆದೊಯ್ದ ಮೊಸಳೆ – ಮುಂದೆನಾಯ್ತು?

0 comments

Farmer: ಎತ್ತುಗಳ ಮೈ ತೊಳೆಯಲು ನದಿಗೆ ಹೋದ 38 ವರ್ಷದ ಕಾಶೀನಾಥ ಹಣಮಂತ ಕಂಬಳಿ ಎಂಬ ರೈತನನ್ನು ಮೊಸಳೆ ಎಳೆದೊಯ್ದ ಘಟನೆ ವಿಜಯಪುರ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಚಗನೂರ ಗ್ರಾಮದ ಪಂಪಹೌಸ್ ಬಳಿ ಈ ಘಟನೆ ನಡೆದಿದೆ.

ಕಾಶೀನಾಥ ಅಮಾವಾಸ್ಯೆಯ ಹಿನ್ನೆಲೆ ಎತ್ತುಗಳನ್ನು ತೊಳೆಯಲೆಂದು ಕೃಷ್ಣಾ ನದಿ ತೀರಕ್ಕೆ ತೆರಳಿದಾಗ ಮೊಸಳೆ ದಾಳಿ ಮಾಡಿ ಅವರನ್ನು ಹೊತ್ತೊಯ್ದಿದ್ದನ್ನು ನೋಡಿರುವುದಾಗಿ ಗ್ರಾಮದ ಧರೆಪ್ಪ ಬಟಕುರ್ಕಿ ತಿಳಿಸಿದ್ದಾರೆ. ನಾಪತ್ತೆಯಾದ ಹಣಮಂತ ಕಂಬಳಿ ಅವರಿಗಾಗಿ ಪೊಲೀಸ್, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

ಮೊಸಳೆ ಹೊತ್ತೊಯ್ದಿರುವ ವ್ಯಕ್ತಿಯ ಕಾರ್ಯಾಚರಣೆಗಾಗಿ ಕೂಡಲಸಂಗಮದಿಂದ ಬೋಟ್‌ ತರಿಸಲಾಗಿದ್ದು ಕಾರ್ಯಾಚರಣೆ ಮಾಡಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ. ಸ್ಥಳದಲ್ಲಿ ಕಂದಾಯ ನಿರೀಕ್ಷಕ ಪವನ್ ತಳವಾರ, ಗ್ರಾಮ ಆಡಳಿತ ಅಧಿಕಾರಿ ಎಚ್.ಸಿ.ಕೊರಬು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.

Illegal immigrants: ರಾಜ್ಯದಲ್ಲಿ 500 ಮಂದಿ ಅಕ್ರಮ ನಿವಾಸಿಗಳು ಪತ್ತೆ – ವಿದೇಶಿ ಪ್ರಜೆಗಳು ವಾಸವಿರುವ ಸ್ಥಳಗಳಲ್ಲಿ ನಿಗಾ

You may also like