Gadaga: Gadaga: ಮನೆ ಕಟ್ಟಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಕೆಳಗಡೆ ಚಿನ್ನದ ನಿಧಿ ಪತ್ತೆಯಾಗಿರುವಂತಹ ಅಪರೂಪದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದಿತ್ತು. ಬಳಿಕ ಮನೆಯವರು ಸ್ವ ಇಚ್ಛೆಯಿಂದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದರು. ಇದೀಗ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಈ ಕುಟುಂಬಕ್ಕೆ ಅದೃಷ್ಟ ಒಲಿದು ಬಂದಿದೆ.
ಹೌದು, ಹೌದು.. ಗದಗದ (Gadag ) ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆ ಪಾಯ ತೆಗೆಯುವಾಗ ನಿಧಿ ಸಿಕ್ಕಿದ್ದು, ಕುಟುಂಬ ಪ್ರಮಾಣಿಕತೆ ಮೆರೆದಿದೆ. ಹೀಗೆ ಮನೆ ಪಾಯ ಅಗೆಯುವಾಗ ಸಿಕ್ಕ ಬರೋಬ್ಬರಿ 65 ಲಕ್ಷ ರೂಪಾಯಿಗಿಂದ ಅಧಿಕ ಮೌಲ್ಯದ ನಿಧಿಯನ್ನು ಆಸೆ ಪಡದೇ ಸರ್ಕಾರಕ್ಕೆ ಒಪ್ಪಿಸಿ ದೇಶಕ್ಕೇ ಮಾದರಿಯಾಗಿದ್ದ ಲಕ್ಕುಂಡಿಯ ಬಾಲಕ ಪ್ರಜ್ವಲ್ ರಿತ್ತಿಗೆ ಇದೀಗ ಲಕ್ ಶುರುವಾಗಿದ್ದು, ಪ್ರಜ್ವಲ್ ರಿತ್ತಿಗೆ ಬಿ.ಹೆಚ್ ಪಾಟೀಲ್ ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಸ್ಥೆ ನೆರವಿನ ಹಸ್ತ ನೀಡಿದೆ. ಪ್ರಜ್ವಲ್‌ಗೆ ಪಿಯುಸಿವರೆಗೂ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದೆ.
ಪ್ರಜ್ವಲ್ ಕುಟುಂಬಕ್ಕೆ ನೆರವು ನೀಡಬೇಕೆಂದು ಹಿರಿಯರು ಮನವಿ ಮಾಡಿದ್ದಾರೆ. ಮನೆ, ಜಾಗ, ಬಾಲಕನ ತಾಯಿಗೆ ಕೆಲಸ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ 3 ವಿಚಾರವನ್ನು ಸಿಎಂ ಜೊತೆ ಚರ್ಚಿಸುತ್ತೇನೆ. ಕಾನೂನು ಪ್ರಕಾರ ಏನ್ ಕೊಡಬೇಕು ಎಲ್ಲವೂ ಕುಟುಂಬಕ್ಕೆ ಮಾಡಲಾಗುತ್ತೆ. ಪ್ರಾಮಾಣಿಕತೆಗೆ ಗೌರವ ನೀಡುವ ಉದ್ದೇಶದಿಂದ ಮನೆ, ನೌಕರಿ ಕೊಡಲಾಗುತ್ತೆ.ಹೂವು ಕಟ್ಟಿಮಾರಾಟ ಮಾಡಿದಾಗ ಮಾತ್ರ ಬದುಕು. ಇಂಥ ಬಡತನದಲ್ಲೂ ಬಂಗಾರ ನಮ್ಮದಲ್ಲ ಅಂತ ನೀಡಿದ್ದಾರೆ. ಕುಟುಂಬದ ಪ್ರಾಮಾಣಿಕತೆಗೆ ಗೌರವ ನೀಡಲಾಗುತ್ತೆ ಎಂದು ಸಚಿವ ಎಚ್ ಕೆ ಪಾಟೀಲ್ ಅವರು ಸ್ಪಷ್ಟಪಡಿಸಿದರು.
