Elephant Meet: ಜಿಂಬಾಂಬ್ವೆ ಸರ್ಕಾರವು ಡಜನ್ಗಟ್ಟಲೆ ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ಜನರಿಗೆ ವಿತರಿಸಲು ಮುಂದಾಗಿರುವಂತಹ ವಿಚಿತ್ರ ವಿಚಾರವೊಂದು ಇದೀಗ ಕೇಳಿ ಬಂದಿದೆ.
ಹೌದು, ಜಿಂಬಾಬ್ವೆ ವಿಶ್ವದ ಎರಡನೇ ಅತಿದೊಡ್ಡ ಆನೆಗಳ ಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ತನ್ನ ಆನೆಗಳ ಸಂಖ್ಯೆಯಲ್ಲಿನ ತ್ವರಿತ ಹೆಚ್ಚಳವನ್ನು ತಡೆಯಲು ಜಿಂಬಾಬ್ವೆ ಇದೀಗ ನಿರ್ಣಾಯಕ ಹೆಜ್ಜೆ ಇಟ್ಟಿದ್ದು, ದೇಶದಲ್ಲಿ ಡಜನ್ಗಟ್ಟಲೆ ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ತನ್ನ ಜನರಿಗೆ ವಿತರಿಸಲು ಮುಂದಾಗಿದೆ. ಈ ಕುರಿತಾಗಿ ಜಿಂಬಾಬ್ವೆ ವನ್ಯಜೀವಿ ಪ್ರಾಧಿಕಾರವನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.
ಅಂದಹಾಗೆ ಜಿಂಬಾಬ್ವೆಯ ಆಗ್ನೇಯದಲ್ಲಿರುವ ದೊಡ್ಡ ಖಾಸಗಿ ಗೇಮ್ ರಿಸರ್ವ್‌ನಲ್ಲಿ ಆನೆಗಳನ್ನು ಬೇಟೆಯಾಡಲಾಗುವುದು ಮತ್ತು ಆರಂಭದಲ್ಲಿ 50 ಆನೆಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಜಿಂಬಾಬ್ವೆ ಉದ್ಯಾನವನಗಳು ಮತ್ತು ವನ್ಯಜೀವಿ ಪ್ರಾಧಿಕಾರ (ZiMPARCS) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಬೇಟೆಯಾಡಿದ ಆನೆಯ ಮಾಂಸವನ್ನು ಸ್ಥಳೀಯ ಜನರಿಗೆ ನೀಡಲಾಗುವುದು ಮತ್ತು ದಂತವನ್ನು ಸಂರಕ್ಷಿಸಿ ಇಡಲಾಗುತ್ತದೆ. ದಂತಗಳನ್ನು ರಾಜ್ಯದ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಎಂದು ZiMPARCS ಹೇಳಿದೆ.
