Bengaluru Stampede: ನಿನ್ನೆಯ ಘಟನೆಯಲ್ಲಿ ತಪ್ಪುಗಳು ಆಗಿರುವುದು ಸತ್ಯ. ಸರ್ಕಾರ ಕೂಡ ತಪ್ಪನ್ನ ಒಪ್ಪಿಕೊಂಡಿದೆ. ನಿರೀಕ್ಷೆ ಮಾಡಿದ್ದಕ್ಕಿಂತ ಅತಿ ಹೆಚ್ಚು ಜನ ಬಂದಿದ್ದಾರೆ. ಹೀಗಾಗಿ ಇಂತಹ ಘಟನೆ ನಡೆದಿದೆ. ಇದರಲ್ಲಿ ಸಿಎಂ ಹಾಗೂ ಡಿಸಿಎಂ ತಪ್ಪು ಯಾವುದು ಇಲ್ಲ. ಕಾರ್ಯಕ್ರಮ ಮಾಡಲು ಸರ್ಕಾರದ ಮೇಲೆ ಒತ್ತಡ ಇತ್ತು. ಈ ಒತ್ತಡದ ಕಾರಣಕ್ಕೆ ಕಾರ್ಯಕ್ರಮ ಮಾಡಲಾಗಿತ್ತು ಎಂದು ಮೈಸೂರಿನಲ್ಲಿ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದ ಮುಂದೆ ಮಾಡಿದ ಕಾರ್ಯಕ್ರಮಕ್ಕೆ ಯಾವುದೇ ಲೋಪ ಉಂಟಾಗಿಲ್ಲ. ಅಲ್ಲಿಗೆ ಅತಿ ಹೆಚ್ಚು ಜನ ಬರಲೇ ಇಲ್ಲ. ಸಚಿವರು ಅವರ ಸಂಬಂಧಿಕರು ಕುಟುಂಬ್ಥರು ಬಂದಿರಬಹುದು. ಅದರಲ್ಲಿ ಯಾವ ಲೋಪ ಉಂಟಾಗಿಲ್ಲ. ಜನ ಕ್ರಿಕೆಟರ್ ಗಳನ್ನ ನೋಡಲು ಸ್ಟೇಡಿಯಂ ಹೋದರು. ಸಮಾರಂಭದ ಮಾಡಿ ಎಂದು ಹೇಳುತ್ತಿದ್ದ ಬಿಜೆಪಿ ಈಗ ಹಿಪೋಗ್ರಕಿ ಪ್ಲೇ ಮಾಡುತ್ತಿದೆ. ಕಾರ್ಯಕ್ರಮ ಆಯೋಜನೆಯಲ್ಲಿ ತಪ್ಪಾಗಿರುವುದು ಸತ್ಯ. ಯಾರು ತಪ್ಪು ಮಾಡಿದ್ದಾರೆ ಎಂಬುದನ್ನ ಪತ್ತೆ ಮಾಡಲು ಮ್ಯಾಜುಸ್ಟ್ರೇಟ್ ಕಮಿಟಿ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈಗಲೇ ಇಂತಹವರೇ ತಪ್ಪಿತಸ್ಥರು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಒಂದು ವೇಳೆ ರೋಡ್ ಶೋ ಮಾಡಿದ್ದರೇ ಕ್ರಿಕೆಟಿಗರ ಭದ್ರತೆಗೆ ತೊಂದರೆಯಾಗುತ್ತಿತ್ತು. ಹೀಗಾಗಿ ರೋಡ್ ಶೋ ಮಾಡಲಿಲ್ಲ. ಎರೆಡೆರೆಡು ಕಡೆ ಕಾರ್ಯಕ್ರಮ ಮಾಡಿದರಿಂದ ಅವಘಡ ಸಂಭವಿಸಿದೆ ಎಂಬುದು ಹೇಳುವುದು ಸರಿಯಲ್ಲ. ನಿರೀಕ್ಷೆಗಿಂತ ಎರೆಡು ಮೂರು ಲಕ್ಷ ಜನ ಬಂದರು. ಹೀಗಾಗಿ ಅವಘಡ ಸಂಭವಿಸಿದೆ ತಮ್ಮ ಸರ್ಕಾರದ ತಪ್ಪನ್ನು ಅತ್ತ ಒಪ್ಪಿಕೊಂಡಂತೆಯೂ ಅಲ್ಲ, ಒಪ್ಪಲಿಲ್ಲ ಅಂತನೂ ಅಲ್ಲ ಅನ್ನುವ ರೀತಿಯಲ್ಲಿ ಹೇಳಿಕೆ ನೀಡಿ ನುಣುಚಿಕೊಂಡಿದ್ದಾರೆ ಸಿಎಂ ಪುತ್ರ.
