2
Actress Ranya Rao: 15ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕನ್ನಡದ ನಟಿ ರನ್ಯಾ ರಾವ್ ಬಂಧನಗೊಂಡಿದ್ದು, ಜೈಲು ಪಾಲಾಗಿದ್ದು, ಈ ಪ್ರಕರಣದಲ್ಲಿ ಡಿಜಿ ರಾಮಚಂದ್ರ ರಾವ್ ಅವರನ್ನು ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರಿಗೂ ತಟ್ಟಿತ್ತು. ರಾಮಚಂದ್ರ ರಾವ್ ಮೇಲೆ ಪ್ರೋಟೋಕಾಲ್ ದುರ್ಬಳಕೆ ಆರೋಪ ಕೇಳಿ ಬಂದಿತ್ತು. ಇದೀಗ ಸರಕಾರ ಡಿಜಿಯ ಕಡ್ಡಾಯ ರಜೆ ಆದೇಶವನ್ನು ಹಿಂಪಡೆದಿದೆ.
ರಾಜ್ಯ ಸರಕಾರ ಡಿಜಿ ರಾಮಚಂದ್ರ ರಾವ್ ಅವರ ಕಡ್ಡಾಯ ರಜೆ ಆದೇಶವನ್ನು ಹಿಂಪಡೆದಿದೆ. ನಟಿ ರನ್ಯಾ ರಾವ್ ಅವರ ಮಲತಂದೆಯಾಗಿರುವ ರಾಮಚಂದ್ರ ರಾವ್ ಮೇಲೆ ಪ್ರೋಟೋಕಾಲ್ ದುರ್ಬಳಕೆ ಆರೋಪ ಕೇಳಿ ಬಂದಿತ್ತು.
ಈ ಆದೇಶವನ್ನು ಹಿಂಪಡೆದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಯಾಗಿ ನಿಯೋಜನೆ ಮಾಡಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಪಾತ್ರದ ಬಗ್ಗೆ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಗೌರವ್ ಗುಪ್ತಾ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು.
