Home » Crime: 22 ಶತ್ರುಗಳ ಹೆಸರನ್ನು ತನ್ನ ಮೈಮೇಲೆ ಹಚ್ಚೆ ಹಾಕಿಸಿಕೊಂಡವನ ಭೀಕರ ಹತ್ಯೆ !

Crime: 22 ಶತ್ರುಗಳ ಹೆಸರನ್ನು ತನ್ನ ಮೈಮೇಲೆ ಹಚ್ಚೆ ಹಾಕಿಸಿಕೊಂಡವನ ಭೀಕರ ಹತ್ಯೆ !

0 comments

Crime: 22 ಶತ್ರುಗಳ ಹೆಸರನ್ನು ಮೈಮೇಲೆ ಟ್ಯಾಟೂ ಹಾಕಿಸಿಕೊಂಡು ಕೋಪ ತೀರಿಸಿಕೊಳ್ಳಲು ಹೋದ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ(Crime) ಬುಧವಾರ ಮುಂಬೈನ ವರ್ಲಿ ಎಂಬಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ರೌಡಿ ಶೀಟರ್ ಹಾಗೂ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಗುರು ವಾಗ್ಮೋರೆ ಪೊಲೀಸರ ಕಣ್ಣು ತಪ್ಪಿಸಿ ಮರೆಯಾಗುತ್ತಿದ್ದ. ಆದರೆ ಈಗ 22 ಶತ್ರುಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಂಡು ಕೊಲೆಯಾದ ವ್ಯಕ್ತಿ  ಗುರು ವಾಗ್ಮೋರೆ (48)ಪೊಲೀಸರ ತನಿಖೆಯ ಮೂಲಕ ಗೊತ್ತಾಗಿದೆ. ಬುಧವಾರ ಬೆಳಿಗ್ಗೆ ವರ್ಲಿ ಪ್ರದೇಶದ ಸ್ಪಾ ಒಂದರಲ್ಲಿ ಗುರು ವಾಗ್ಮೋರೆಯ ಮೇಲೆ ದಾಳಿಯಾಗಿತ್ತು.

ಇದೇನು ವಿಸ್ಮಯ ರೌಡಿ ಗುರು ವಾಗ್ಮೋರೆ ಮೈಮೇಲೆ ಟ್ಯಾಟೂವಿನಲ್ಲಿ ಹೆಸರಿದ್ದ ಅವನ ಶತ್ರುಗಳೆ ಗುರುವನ್ನು ಬರ್ಬರವಾಗಿ ಕೊಲೆ ಮಾಡಿದ್ದ ಘಟನೆ ಮುಂಬೈ ಯ ವರ್ಲಿ ಎಂಬಲ್ಲಿ ಕಂಡು ಬಂದಿದೆ. ಪೊಲೀಸರ ಕೈಗೆ ಸಿಕ್ಕಿ ಬಿದ್ದ ಐವರ ಹೆಸರು ಟ್ಯಾಟೂ ರೂಪದಲ್ಲಿ ಗುರುವಿನ ಮೈಮೇಲೆ ಇದ್ದ ಟ್ಯಾಟೂವಿನಲ್ಲಿ ಇತ್ತು ಎಂದು ಪೊಲೀಸರು ಆರೋಪಿಯ ಬಾಯಿ ಬಿಡಿಸಿ ತನಿಖೆ ಮಾಡಿ ಹೇಳಿದ್ದಾರೆ.

ಸದ್ಯ ಮುಂಬೈನ ವಿವಿಧ ಪೊಲೀಸ್ ಠಾಣೆಗಳಲ್ಲಿ ಗುರು ವಾಗ್ಮೋರ್ ವಿರುದ್ಧ 22 ಪ್ರಕರಣ ದಾಖಲಾಗಿವೆ, ಎಂದು ಮುಂಬೈ ಪೊಲೀಸರು ಹೇಳಿಕೆ ನೀಡಿದ್ದಾರೆ.

You may also like

Leave a Comment