Home » Janardhana Reddy-Daiva: ನಿಜವಾಯ್ತು ಕರಾವಳಿ ದೈವದ ಕಾರ್ಣಿಕ: ಜನಾರ್ದನ ರೆಡ್ಡಿ ಜೈಲಿನ ಬಿಡುಗಡೆ ಹಿಂದಿತ್ತು ದೈವದ ಅಭಯ

Janardhana Reddy-Daiva: ನಿಜವಾಯ್ತು ಕರಾವಳಿ ದೈವದ ಕಾರ್ಣಿಕ: ಜನಾರ್ದನ ರೆಡ್ಡಿ ಜೈಲಿನ ಬಿಡುಗಡೆ ಹಿಂದಿತ್ತು ದೈವದ ಅಭಯ

by Mallika
0 comments

Gali Janardhana Reddy: ಶಾಸಕ ಜನಾರ್ಧನ ರೆಡ್ಡಿ ಅವರು ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ದೈವ ನೀಡಿದ ಅಭಯ ನಿಜವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಸತ್ಯದ ದೈವಸ್ಥಾನ ಅರೇಲ್ತಾಡಿ ಶ್ರೀ ಉಲ್ಲಾಕ್ಳು, ಕೆಡೆಂಜೊಡಿತ್ತಾಯಿ ದೈವಸ್ಥಾನದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತ ಮೇ 13 ರಂದು ಬಿಡುಗಡೆ ಕುರಿತು ಕೇಳಿದ ಸಂದರ್ಭದಲ್ಲಿ ಒಂದು ತಿಂಗಳ ಒಳಗಾಗಿ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವ ಪಾತ್ರ ನುಡಿದಿದ್ದರು.

ಈಗ ದೈವದ ನುಡಿಯಂತೆ ಜೂ.11 ರಂದು ಜನಾರ್ದನ ರೆಡ್ಡಿಯವರು ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಗಾಲಿ ಜನಾರ್ದನ ರೆಡ್ಡಿಯವರು ಈ ರೀತಿ ಶೇರ್‌ ಮಾಡಿದ್ದಾರೆ.

“ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಸತ್ಯದ ವೈವಸ್ಥಾನ ಅರೇಲ್ತಾಡಿ ಶ್ರೀ ಉಲ್ಲಾಕು, ಕೆಡೆಂಜೊಡಿತ್ತಾಯಿ ದೇವಸ್ಥಾನದಲ್ಲಿ ಮೇ ತಿಂಗಳ 13 ರಂದು ನಡೆಯಬೇಕಿದ್ದ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಆದರೆ ಬಂಧನದ ಕಾರಣದಿಂದ ನಾನು ಭಾಗವಹಿಸಲಾಗಿಲ್ಲ.

ಮೇ ತಿಂಗಳ 15ರಂದು ನಡೆದ ನೇಮೋತ್ಸವ ಕಾರ್ಯಕ್ರಮದಲ್ಲಿ ದೈವದ ಬಳಿ ಗ್ರಾಮಸ್ಥರು ಕೇಳಿದಾಗ ಜನಾರ್ಧನ ರೆಡ್ಡಿ ಅವರು ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವವು ನುಡಿದಿತ್ತು.

ದೈವ ನುಡಿದಂತೆ ನಾನು 27 ದಿನಕ್ಕೆ ಬಿಡುಗಡೆಯಾಗಿದ್ದೆ. ಇದು ಕಾರ್ಣಿಕ ದೈವ ಕೆಡೆಂಜೊಡಿತ್ತಾಯಿ ದೈವದ ಅನುಗ್ರಹʼ ಎಂದು ಬರೆದಿದ್ದಾರೆ.

You may also like