Home » Crime: ಪತ್ನಿಯ ರುಂಡವನ್ನು ಕೈಯಲ್ಲಿ ಹಿಡಿದು ಊರು ಸುತ್ತಿ ಭಯ ಹುಟ್ಟಿಸಿದ ಕಿರಾತಕ: ಕೊನೆಗೂ ವ್ಯಕ್ತಿಯ ಬಂಧನ

Crime: ಪತ್ನಿಯ ರುಂಡವನ್ನು ಕೈಯಲ್ಲಿ ಹಿಡಿದು ಊರು ಸುತ್ತಿ ಭಯ ಹುಟ್ಟಿಸಿದ ಕಿರಾತಕ: ಕೊನೆಗೂ ವ್ಯಕ್ತಿಯ ಬಂಧನ

0 comments

Crime: ಪತ್ನಿಯ ಮೇಲಿನ ಕೋಪಕ್ಕೆ ವ್ಯಕ್ತಿಯೊಬ್ಬ ಆಕೆಯನ್ನು ಕೊಲೆ ಮಾಡಿ ರುಂಡ ಹಿಡಿದು ಊರೆಲ್ಲಾ ಓಡಾಡಿದ್ದು ಅಲ್ಲದೇ ಊರಿನ ಜನರಲ್ಲಿ ಭಯ ಹುಟ್ಟಿಸಿದ್ದು , ಇದೀಗ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಮಾಧೇಪುರದ ಶ್ರೀನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಖಾರಿಯಾದಲ್ಲಿ ಘಟನೆ (Crime) ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿದ್ದಾನೆ.

ಊರ ಜನರಿಂದ ಮಾಹಿತಿ ದೊರೆತ ಪೊಲೀಸರು, ತಕ್ಷಣ ಕ್ರಮ ಕೈಗೊಂಡು ಘಟನೆಯ ಪ್ರಮುಖ ಆರೋಪಿ ಅರ್ಜುನ್ ಶರ್ಮಾನನ್ನು ಬಂಧಿಸಿದ್ದಾರೆ. ಪತ್ನಿಯನ್ನು ಏಕೆ ಕೊಂದಿದ್ದೀರಿ ಎಂದು ಪ್ರಶ್ನಿಸಿದಾಗ ಆಕೆಗೆ ಬೇರೊಬ್ಬ ವ್ಯಕ್ತಿಯ ಜತೆ ಅಕ್ರಮ ಸಂಬಂಧವಿತ್ತು ಎಂದು ಹೇಳಿದ್ದಾನೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆಗೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ.

You may also like

Leave a Comment