Subramanya: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ಶೀಘ್ರ ಪ್ರಕಟ ನಿರೀಕ್ಷೆ ಮೂಡಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮುಜರಾಯಿ ಸಚಿವರಿಗೆ ನೀಡಿದ ಪಟ್ಟಿ ವೈರಲ್ ಆಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ಶೀಘ್ರ ರಚನೆಗೊಳ್ಳುವ ಸಂಭವವಿದೆ.
ಈ ಮಧ್ಯೆ ವ್ಯವಸ್ಥಾಪನಾ ಸಮಿತಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಜರಾಯಿ ಸಚಿವ ರಾಮ ಲಿಂಗಾ ರೆಡ್ಡಿ ಅವರಿಗೆ ನೀಡಿದ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಪಟ್ಟಿಯಲ್ಲಿ ಅಶೋಕ್ ನೆಕ್ರಾಜೆ, ಹರೀಶ್ ಇಂಜಾಡಿ, ಎನ್. ಜಯಪ್ರಕಾಶ್ ರೈ, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಡಾ. ಬಿ ರಘು, ಅಜಿತ್ ಪೂಜಾರಿ ಕಡಬ, ಮಹೇಶ್ ಕುಮಾರ್ ಕರಿಕ್ಕಳ ಹಾಗೂ ಪ್ರಧಾನ ಅರ್ಚಕರ ಹೆಸರುಗಳು ಉಲ್ಲೇಖ ಆಗಿವೆ.
