Home » Kukke Subrahmanya: ಕುಕ್ಕೇ ಸುಬ್ರಹ್ಮಣ್ಯನ ಹುಂಡಿ ಸೇರಿದ ಹಣ ಏನಾಗುತ್ತದೆ!?? ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಯಿತೊಂದು ಸತ್ಯ

Kukke Subrahmanya: ಕುಕ್ಕೇ ಸುಬ್ರಹ್ಮಣ್ಯನ ಹುಂಡಿ ಸೇರಿದ ಹಣ ಏನಾಗುತ್ತದೆ!?? ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಯಿತೊಂದು ಸತ್ಯ

1 comment
Kukke Subrahmanya

ದಕ್ಷಿಣ ಭಾರತದ ಪ್ರಮುಖ ದೇವಾಲಯ, ಸರ್ಪ ಸಂಸ್ಕಾರಕ್ಕೆ ಪ್ರಸಿದ್ಧಿ ಪಡೆದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಾಲಯದ ಹುಂಡಿಯಲ್ಲಿ ಭಕ್ತರು ಹಾಕಿದ ಹಣ ಸಮಾಜಕ್ಕೆ ಉಪಯೋಗವಾಗುವುದಿಲ್ಲ, ಹುಂಡಿಗೆ ಯಾರೂ ಹಣ ಹಾಕಬೇಡಿ ಎನ್ನುವ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದು ಇದಕ್ಕೆ ಸಾಮಾಜಿಕ ಜಾಲತಾಣವೇ ತಕ್ಕ ಉತ್ತರ ನೀಡಿದೆ.

ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಭಕ್ತರು ಹುಂಡಿಗೆ ಹಾಕಿದ ಹಣ, ಪೂಜೆ ಹಾಗೂ ಬಾಡಿಗೆಯಲ್ಲಿ ಸಿಕ್ಕ ಆದಾಯವೆಲ್ಲವೂ ದೇವಾಲಯದ ಖರ್ಚು ಕಳೆದು ಶೇ 10% ಮಾತ್ರ ಮುಜುರಾಯಿ ಇಲಾಖೆಗೆ ಅಂದರೆ ಸರ್ಕಾರಕ್ಕೆ ಕೊಡಬೇಕಾಗುತ್ತದೆ. ಉಳಿದಂತೆ ಅನ್ನದಾನ ಸೇವೆಗೂ ದೇಣಿಗೆ ಬರುತ್ತಿದ್ದು ಅವುಗಳನ್ನು ಫಿಕ್ಸೆಡ್ ಡಿಪಾಸಿಟ್ ಮೂಲಕ ಅನ್ನದಾನಕ್ಕೆ ಉಪಯೋಗಿಸಿಕೊಳ್ಳಗುತ್ತಿದ್ದು, ತಾಲೂಕಿನಾದ್ಯಂತ ದೇವಾಲಯ ಹಾಗೂ ಸಂಘ ಸಂಸ್ಥೆಗಳ ಕಾರ್ಯಕ್ರಮಗಳ ಸಾರ್ವಜನಿಕ ಅನ್ನಸಂತರ್ಪಣೆಗೂ ಕುಕ್ಕೆಯಿಂದಲೇ ಅನ್ನದಾನ ನೀಡಲಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.

ಅಭಿವೃದ್ಧಿ ಕಾರ್ಯಗಳಿಗಾಗಿ ಆಡಳಿತ ಮಂಡಳಿಯ ನಿರ್ಣಯದ ಬಳಿಕ ಸುಮಾರು 5 ಲಕ್ಷದ ವರೆಗೆ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ,25 ಲಕ್ಷದವರೆಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸುಮಾರು 2 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮುಜುರಾಯಿ ಇಲಾಖೆಗೆ ಅನುದಾನ ಬಿಡುಗಡೆ ಮಾಡುವ ಅವಕಾಶವಿದ್ದು, ಹೆಚ್ಚಿನ ಅನುದಾನಕ್ಕೆ ಸರ್ಕಾರದ ಕ್ಯಾಬಿನೆಟ್ ಅನುಮೋದನೆ ಪಡೆಯಬೇಕಾಗಿದೆ.ಅಭಿವೃದ್ಧಿ ಕಾರ್ಯಗಳನ್ನು ಟೆಂಡರ್ ಮೂಲಕ ಅಥವಾ ಸರ್ಕಾರದ ಸಂಸ್ಥೆಗಳ ಮೂಲಕವೇ ನಡೆಸಬೇಕಾಗಿದ್ದು,ಇಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಕಿಂಚಿತ್ತೂ ಅವಕಾಶವಿರುವುದಿಲ್ಲ.

ಪ್ರಸ್ತುತ ದೇವಾಲಯದ ವತಿಯಿಂದ ಇಡೀ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ,ಮಾಸ್ಟರ್ ಪ್ಲಾನ್ ಮೂಲಕ ಮುಖ್ಯ ರಸ್ತೆಯ ಅಗಲೀಕರಣ,ಕಾಂಕ್ರೀಟೀಕರಣ, ಬೀದಿ ದೀಪಗಳನ್ನು ಅಳವಡಿಸಲಾಗಿದ್ದು ಅವುಗಳ ನಿರ್ವಹಣೆಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತಿದೆ.ಅಲ್ಲದೇ ಕಡಬ, ಸುಳ್ಯದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಆಂಬುಲೆನ್ಸ್ ಹಾಗೂ ಡಯಾಲಿಸಿಸ್ ಉಪಕಾರಣಗಳನ್ನು ನೀಡಲಾಗಿದೆ. ತಾಲೂಕಿನ ದೇವಾಲಯಗಳ ಕಾರ್ಯಕ್ರಮಗಳಿಗೂ ಅನ್ನಸಂತರ್ಪಣೆಯ ಪುಣ್ಯ ಕಾರ್ಯವನ್ನು ಕುಕ್ಕೇ ನಡೆಸಿಕೊಂಡು ಬಂದಿದ್ದು,ಶಾಲಾ ಕಾಲೇಜುಗಳಿಗೂ ಭೋಜನದ ವ್ಯವಸ್ಥೆ ದೇವಾಲಯದ ವತಿಯಿಂದ ಮಾಡಲಾಗಿದೆ.

ಹುಂಡಿಗೆ ಹಾಕಿದ ಹಣ ಸಮಾಜಕ್ಕೆ ಉಪಯೋಗವಾಗುವುದಿಲ್ಲ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಕುಕ್ಕೇ ಸುಬ್ರಹ್ಮಣ್ಯದ ಸೋಶಿಯಲ್ ಮೀಡಿಯಾ ಪೇಜ್ ಈ ಮೇಲಿನ ಉತ್ತರಗಳನ್ನು ನೀಡುವ ಮೂಲಕ ಅನುಮಾನ, ಗೊಂದಲಗಳಿಗೆ ತೆರೆ ಎಳೆದಿದೆ.

 

ಇದನ್ನು ಓದಿ: ಮುಖ್ಯಮಂತ್ರಿಯ ಫೋಟೋ ಬಳಸಿ ಸೋಶಿಯಲ್​ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್: ಕಾನೂನು ಕ್ರಮಕ್ಕೆ ಕಾಂಗ್ರೆಸ್​ ಒತ್ತಾಯ

You may also like

Leave a Comment