Home » Gadaga: ಹಗಲು, ರಾತ್ರಿಯಿಡೀ ದೇವಾಲಯದಲ್ಲಿ ಗೆಜ್ಜೆನಾದ- ದೇವಿಮೂರ್ತಿ ಸ್ಥಳಾಂತರಿಸಿ ಪೂಜೆ ನಿಲ್ಲಿಸಿದ್ದಕ್ಕೆ ಶುರುವಾಯ್ತಾ ನಿಗೂಢ ಶಬ್ದ?

Gadaga: ಹಗಲು, ರಾತ್ರಿಯಿಡೀ ದೇವಾಲಯದಲ್ಲಿ ಗೆಜ್ಜೆನಾದ- ದೇವಿಮೂರ್ತಿ ಸ್ಥಳಾಂತರಿಸಿ ಪೂಜೆ ನಿಲ್ಲಿಸಿದ್ದಕ್ಕೆ ಶುರುವಾಯ್ತಾ ನಿಗೂಢ ಶಬ್ದ?

0 comments

Gadaga: ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ ಕೇಳಿಬಂದಿದ್ದು, ಅದನ್ನು ಕೇಳಿಸಿಕೊಳ್ಳಲು ಗ್ರಾಮಸ್ಥರು ರಾತ್ರಿಯಿಡೀ ಜಾಗರಣೆ ಮಾಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೌದು, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದಲ್ಲಿ ಗೆಜ್ಜೆ ಸದ್ದು ಆತಂಕ ಮೂಡಿಸಿದೆ. ಗ್ರಾಮದಲ್ಲಿರೋ ಆಂಜನೇಯನ ಗುಡಿಯಲ್ಲಿ ದುರ್ಗಮ್ಮನ ಗೆಜ್ಜೆ ಸದ್ದು ಕೇಳಿ ಬರ್ತಿದೆ ಎಂದು ಇಲ್ಲಿನ ಗ್ರಾಮಸ್ಥರು ಗಾಬರಿಯಿಂದಲೇ ನುಡಿದಿದ್ದಾರೆ. ಕೇವಲ ರಾತ್ರಿಯಲ್ಲಿ ಮಾತ್ರವಲ್ಲ ಹಗಲಿನಲ್ಲೂ ದೇಗುಲದ ಬಳಿ ಗೆಜ್ಜೆ ಸದ್ದು ಕೇಳಿ ಬರ್ತಾನೆ ಇದೆಯಂತೆ. ಇಂದೂ ಬಾರದ ಸದ್ದು ಈಗ ಹೇಗೆ? ಹಾಗೂ ಬರ್ತಿದೆ ಎಂಬ ಪ್ರಶ್ನೆ ಮೂಡಿದೆ.

ಮೂಲಗಳ ಪ್ರಕಾರ, ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ದೇವಾಲಯಕ್ಕೆಂದು ತಂದ ದುರ್ಗಮ್ಮ ಮತ್ತು ಮಾಯಮ್ಮ ದೇವಿ ಮೂರ್ತಿಗಳನ್ನು ಆಂಜನೇಯ ದೇಗುಲದಲ್ಲಿ ತಾತ್ಕಾಲಿಕವಾಗಿ ಇರಿಸಿದ ನಂತರ ಗೆಜ್ಜೆನಾದ ಕೇಳಿಸಲು ಪ್ರಾರಂಭಿಸಿದೆ. ಗುರುವಾರ ರಾತ್ರಿ 8 ಗಂಟೆಯಿಂದ ಆರಂಭವಾದ ಈ ಶಬ್ದ ಇದುವರೆಗೆ ನಿಂತಿಲ್ಲ ಎಂದು ಸ್ಥಳೀಯ ನಿವಾಸಿ ಮಹೇಶ್ ತಿಳಿಸಿದ್ದಾರೆ.

ಇನ್ನು ಕೆಲ ಗ್ರಾಮಸ್ಥರು, “ಸ್ವತಃ ದುರ್ಗಾಮಾತೆ ಮತ್ತು ಮಾಯಮ್ಮ ದೇವಿಯರೇ ಸಂಚರಿಸುತ್ತಿರಬಹುದು. ಅದಕ್ಕೇ ಗೆಜ್ಜೆ ನಾದ ಕೇಳಿಸುತ್ತಿದೆ” ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ. ಈ ವಿಸ್ಮಯಕಾರಿ ಘಟನೆ ಸುದ್ದಿ ಹರಡುತ್ತಿದ್ದಂತೆ, ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಜನರು ಈ ನಿಗೂಢ ಗೆಜ್ಜೆ ಸದ್ದನ್ನು ಕೇಳಲು ಕೊರ್ಲಹಳ್ಳಿ ಗ್ರಾಮಕ್ಕೆ ತಂಡೋಪ ತಂಡವಾಗಿ ಬರುತ್ತಿದ್ದಾರೆ.

ರಾತ್ರಿಯಿಡೀ ಕೇಳಿಸೋ ಈ ಗೆಜ್ಜೆ ನಾದಕ್ಕೆ ಕೋರ್ಲಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ದೇವಸ್ಥಾನದ ಒಳಗೆ ಹೋಗೋಕು ಭಯ ಪಡ್ತಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಏನಿದು ನಿಗೂಢ ಸದ್ದು? ನಿಜಕ್ಕೂ ಇದು ದೇವಿಯ ಪವಾಡವಾ ಅಥವಾ ಯಾರ ಕೈವಾಡವಿದ್ಯಾ ಎನ್ನುವ ಪ್ರಶ್ನೆ ಕೂಡ ಕೆಲವರಲ್ಲಿ ಮೂಡಿದೆ

You may also like