Home » Pakistan : ಭಾರತಕ್ಕಿಂತ 3 ಪಟ್ಟು ಹೆಚ್ಚು ಪಾಕಿಸ್ತಾನದಲ್ಲಿ ಚಿನ್ನದ ಬೆಲೆ – ಹಾಗಿದ್ದರೆ 10 ಗ್ರಾಂ ಚಿನ್ನಕ್ಕೆ ಎಷ್ಟಾಗುತ್ತೆ?

Pakistan : ಭಾರತಕ್ಕಿಂತ 3 ಪಟ್ಟು ಹೆಚ್ಚು ಪಾಕಿಸ್ತಾನದಲ್ಲಿ ಚಿನ್ನದ ಬೆಲೆ – ಹಾಗಿದ್ದರೆ 10 ಗ್ರಾಂ ಚಿನ್ನಕ್ಕೆ ಎಷ್ಟಾಗುತ್ತೆ?

0 comments

Pakistan : ಜಗತ್ತಿನಾದ್ಯಂತ ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತದೆ. ಈಗಾಗಲೇ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ಒಂದು ಲಕ್ಷದ ಗಡಿ ದಾಟಿದ್ದು ಸರ್ವಕಾಲಿಕ ದಾಖಲೆಯ ಏರಿಕೆಯನ್ನು ಕಂಡಿದೆ. ಇದರ ನಡುವೆ ಪಾಕಿಸ್ತಾನದಲ್ಲಿನ ಚಿನ್ನದ ಬೆಲೆಯ ಕುರಿತು ಚರ್ಚೆಯಾಗಿದ್ದು ಇಲ್ಲಿ ಚಿನ್ನದ ಬೆಲೆಯು ಭಾರತಕ್ಕಿಂತ ಮೂರು ಪಟ್ಟು ಹೆಚ್ಚಿದೆ ಎನ್ನಲಾಗುತ್ತಿದೆ.

ಹೌದು, ಪಾಕಿಸ್ತಾನದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 3,69,084 ಪಾಕಿಸ್ತಾನಿ ರೂಪಾಯಿಗಳಷ್ಟಿದೆ, ಆದರೆ ಭಾರತದಲ್ಲಿ ಅದೇ ಚಿನ್ನ 10 ಗ್ರಾಂಗೆ ಕೇವಲ ₹1,24,260. ಇದರಿಂದ ಪಾಕಿಸ್ತಾನದ ಚಿನ್ನದ ಬೆಲೆ ಭಾರತಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಿರುವುದು ಸ್ಪಷ್ಟವಾಗಿದೆ.

ಪಾಕಿಸ್ತಾನದ ಚಿನ್ನದ ದರಗಳು (ಪ್ರತಿ 10 ಗ್ರಾಂಗೆ):

24 ಕ್ಯಾರೆಟ್: 3,69,084 PKR

22 ಕ್ಯಾರೆಟ್: 3,38,327 PKR

18 ಕ್ಯಾರೆಟ್: 2,76,813 PKR

ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವೇನೆಂದು ನೋಡುವುದಾದರೆ ಪಾಕಿಸ್ತಾನಿ ರೂಪಾಯಿಯ ಮೌಲ್ಯ ಕುಸಿತ, ತೀವ್ರ ಹಣದುಬ್ಬರ, ಮತ್ತು ಡಾಲರ್ ವಿರುದ್ಧ ರೂಪಾಯಿಯ ದುರ್ಬಲತೆ. ಜಾಗತಿಕ ಚಿನ್ನದ ವ್ಯಾಪಾರದಲ್ಲಿ ಡಾಲರ್ ಬಳಕೆಯಿಂದಾಗಿ, ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ.

ಇದನ್ನೂ ಓದಿ;Flipkart : ದೀಪಾವಳಿಗೆ ಬಂಪರ್ ಆಫರ್ ಘೋಷಿಸಿದ Flipkart – ಟಿವಿ ಮೊಬೈಲ್ ದರಗಳಲ್ಲಿ ಬಾರಿ ಇಳಿಕೆ

You may also like