Tomato Price Hike: ಕೆಲವು ದಿನಗಳ ಹಿಂದೆ ಕೇಳುವವರ ಗತಿಯಿಲ್ಲದೆ ಹತ್ತು ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೊಟೊ ಇಂದು ದಿಢೀರನೆ ಏರಿಕೆ ಕಂಡಿದ್ದು, ಒಂದು ಕೆಜಿಗೆ 100ರೂ ಆಗಿದೆ.
ಹೌದು, ಕಳೆದೊಂದು ತಿಂಗಳಿನಿಂದ ಟೊಮೆಟೊ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ನಗರದ ಹಾಪ್ ಕಾಮ್ಸ್‌ಗಳಲ್ಲಿ ಉತ್ತಮ ದರ್ಜೆಯ ಟೊಮೆಟೋ ಕೇಜಿಗೆ 80 ಇದೆ. ಚಿಕ್ಕಬಳ್ಳಾಪುರದ ಚಿಂತಾಮಣಿ ಎಪಿಎಂಸಿಯಲ್ಲಿ 14 ಕೇಜಿ ಟೊಮೆಟೋ ಬೆಲೆ 600 ರಿಂದ 800 ವರೆಗೆ ಮಾರಾಟವಾಗುತ್ತಿದೆ, ಗೋಲಿ ಗಾತ್ರದ ಟೊಮೆಟೋ 14 ಕೇಜಿ ಬಾಕ್ಸ್ ಒಂದಕ್ಕೆ 350 ರಿಂದ 400 ವರೆಗೂ ಮಾರಾಟವಾಗಿದೆ.
ಪ್ರತಿದಿನ ಮಾರುಕಟ್ಟೆಗೆ 800 ರಿಂದ 1000 ಬಾಕ್ಸ್ ಟೊಮೆಟೋ ಬರುತ್ತಿವೆ, ಉತ್ತಮ ಟೊಮೆಟೋ ಎಂದೇ ಹೆಸರು ಪಡೆದಿರುವ ಸಾಹು ಎಂಬ ಹೈಬ್ರಿಡ್ ಟೊಮೆಟೋ ಬಾಕ್ಸ್ ಒಂದಕ್ಕೆ ಹೊರಗೆ ತಳ್ಳುವ ಗಾಡಿಯಲ್ಲಿ ಕೇಜಿ ಟೊಮೆಟೋ 90ಕ್ಕೆ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಗೆ ಹೋಗುವ ಟೊಮೆಟೋ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿಬೆಲೆ ಹೆಚ್ಚಾಗುತ್ತಿದೆ.
800 ರಿಂದ 1000 ವರೆಗೂ ಮಾರಾಟವಾಗುತ್ತಿದೆ.
ಒಟ್ನಲ್ಲಿ ಟೊಮ್ಯಾಟೊ ಬೆಲೆ ಹೆಚ್ಚಳವಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆಯಾದರೂ.ಗ್ರಾಹಕರಿಗೆ ಇನ್ನಷ್ಟು ಬೆಲೆ ಹೆಚ್ಚಳವಾಗಲಿದೆಯೇ ಎನ್ನುವ ಆತಂಕ ಶುರುವಾಗಿದೆ.
