3
Marriage: ವಿಜಯಪುರ: ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ತನ್ನ ತಂದೆ ಮದುವೆ ಮಾಡಿಸುತ್ತಿಲ್ಲ ಎಂದು ನೊಂದ ಮಗನೋರ್ವ ಮೊಬೈಲ್ ಟವರ್ ಏರಿ ರಾತ್ರಿಯಿಡೀ ಕುಳಿತ ಘಟನೆ ನಡೆದಿದೆ.
ಮದುವೆ ಮಾಡಿಸಿ, ಆಸ್ತಿಯಲ್ಲಿ ಪಾಲು ಕೊಡಿ ಎಂದು ತಂದೆಗೆ ಶ್ರೀಶೈಲ ನಾಗಪ್ಪ ಪದೇ ಪದೇ ಹೇಳುತ್ತಿದ್ದ. ಮಂಗಳವಾರ ರಾತ್ರಿಯೂ ಈ ವಿಷಯಕ್ಕೆ ಮತ್ತೆ ಜಗಳ ಮಾಡಿದ್ದಾನೆ. ರಾತ್ರಿ 11 ಗಂಟೆ ಸುಮಾರಿಗೆ ಟವರ್ ಏರಿ ಅಲ್ಲಿಯೇ ಕಳೆದಿದ್ದಾನೆ. ಬೆಳಗ್ಗೆ 10 ಗಂಟೆಗೆ ಗ್ರಾಮದ ಜನರು ಇದನ್ನು ಗಮನಿಸಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ನಂತರ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದಿದ್ದು ಆತನ ಮನವೊಲಿಸಿ ಕೆಳಗಡೆ ಇಳಿಸಲು ಯಶಸ್ವಿಯಾಗಿದ್ದಾರೆ. ಪಿಎಸ್‌ಐ ದೇವರಾಜ ಉಳ್ಳಾಗಡ್ಡಿ, ಗ್ರಾಮದ ಕಾಶೀನಾಥಗೌಡ ಕಾಖಂಡಕಿ ಅವರು ಯುವಕನಿಗೆ ತಿಳಿ ಹೇಳಿ ನಂತರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸಿದ್ದಾರೆ.
