Home » Chinese Restaurant: ರುಚಿ ಹೆಚ್ಚಿಸಲು ಸೂಪ್‌ಗೆ ಮೂತ್ರ ಮಾಡಿ ಗ್ರಾಹಕರಿಗೆ ಕೊಟ್ಟ ಸಿಬ್ಬಂದಿ! ವಿಡಿಯೋ ವೈರಲ್‌

Chinese Restaurant: ರುಚಿ ಹೆಚ್ಚಿಸಲು ಸೂಪ್‌ಗೆ ಮೂತ್ರ ಮಾಡಿ ಗ್ರಾಹಕರಿಗೆ ಕೊಟ್ಟ ಸಿಬ್ಬಂದಿ! ವಿಡಿಯೋ ವೈರಲ್‌

0 comments

Chinese Restaurant: ಶಾಂಘೈ ನಗರದ ಔಟ್‌ಲೆಟ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ರೆಸ್ಟೋರೆಂಟ್‌ವೊಂದರಲ್ಲಿ ಇಬ್ಬರು ಹುಡುಗರು ಸೂಪಲ್ಲಿ ಮೂತ್ರ ವಿಸರ್ಜಿಸಿದ ವೀಡಿಯೋವೊಂದು ವೈರಲ್‌ ಆಗಿದ್ದು. ನಮ್ಮ ಸಿಬ್ಬಂದಿಯಿಂದ ಆದ ತಪ್ಪನ್ನು ಒಪ್ಪಿಕೊಂಡ ಮಾಲೀಕರು 4000 ಗ್ರಾಹಕರಿಗೆ ಪರಿಹಾರ ನೀಡಲು ಮುಂದಾಗಿದ್ದಾರೆ.

ಚೀನಾದ ಹಾಟ್‌ಪಾಟ್‌ ದೈತ್ಯ ಹೈಡಿಲಾವ್‌ ಸುಮಾರು 4000 ಗ್ರಾಹಕರಿಗೆ ಪರಿಹಾರ ನೀಡಲು ಮುಂದಾಗಿದೆ. ತಮ್ಮ ರೆಸ್ಟೋರೆಂಟ್‌ನಲ್ಲಿ ಎಂದು ಹೈಡಿಲಾವ್‌ ಕಳೆದ ದಿನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಒಪ್ಪಿಕೊಂಡಿದೆ.

ರೆಸ್ಟೋರೆಂಟ್‌ನಲ್ಲಿ ಇಬ್ಬರು ಹುಡುಗರು ಸೂಪಲ್ಲಿ ಮೂತ್ರ ವಿಸರ್ಜಿಸಿರುವ ವಿಡಿಯೋ ವೈರಲ್‌ ಆಗಿದೆ. ಗ್ರಾಹಕರಿಗೆ ಸೂಪ್‌ ಕುಡಿಯುವಾಗ ಅದರ ರುಚಿ ಹೆಚ್ಚಲು ಮೂತ್ರ ಮಾಡಿರುವುದಾಗಿ ಹೇಳಲಾಗಿದೆ. ಪರಿಹಾರದ ಮೊತ್ತವನ್ನು ಕಂಪನಿ ಬಹಿರಂಗಗೊಳಿಸಿಲ್ಲ. ಮಕ್ಕಳನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಶಾಂಘೈ ಪೊಲೀಸರು ತಿಳಿಸಿದ್ದಾರೆ.

You may also like