Home » Karnataka Govt: ನರೇಂದ್ರ ಮೋದಿಯ ಈ ಕರೆಗೆ ತಲೆಬಾಗಿದ ರಾಜ್ಯ ಸರ್ಕಾರ !!

Karnataka Govt: ನರೇಂದ್ರ ಮೋದಿಯ ಈ ಕರೆಗೆ ತಲೆಬಾಗಿದ ರಾಜ್ಯ ಸರ್ಕಾರ !!

0 comments

 

Karnataka Govt : ಕೇಂದ್ರ ಸರ್ಕಾರ ತಿಳಿಸಿದಂತೆ ಮಧ್ಯಾಹ್ನದ ಬಿಸಿಯೂಟದಲ್ಲಿ ಎಣ್ಣೆ ಬಳಕೆಯನ್ನು ಶೇ.10ರಷ್ಟು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಕೊನೆಗೂ ರಾಜ್ಯ ಸರ್ಕಾರ ನರೇಂದ್ರ ಮೋದಿ ಅವರ ಕರೆಗೆ ತಲೆಬಾಗಿದೆ.

 

ಶಾಲಾ ವಯಸ್ಸಿನ ಮಕ್ಕಳಲ್ಲಿ ಬೊಜ್ಜು ಮತ್ತು ಹೃದಯ ಕಾಯಿಲೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವು ಮಧ್ಯಾಹ್ನದ ಬಿಸಿ ಊಟದಲ್ಲಿ ಎಣ್ಣೆ ಬಳಕೆಯನ್ನು ಶೇಕಡ 10 ರಷ್ಟು ಕಡಿಮೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಹೀಗಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ಪತ್ರವನ್ನು ಅನುಸರಿಸಿ ಕೇಂದ್ರವು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ಈ ಕುರಿತಾಗಿ ಸೂಚನೆಯನ್ನು ನೀಡಿದ್ದು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ ಉತ್ತೇಜಿಸಲು, ದೈನಂದಿನ ಊಟದಲ್ಲಿ ಎಚ್ಚರಿಕೆಯಿಂದ ಅಡುಗೆ ಎಣ್ಣೆ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಅತ್ಯಂತ ಕಡಿಮೆ ಅಡುಗೆ ಎಣ್ಣೆ ಬಳಸಿ ತಾಜಾ ಹಾಗೂ ಪೌಷ್ಟಿಕ ಬಿಸಿಯೂಟವನ್ನು ತಯಾರಿಸಲು ಮತ್ತು ಸೇವಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

 

ಅಲ್ಲದೆ ಅಡುಗೆ ಎಣ್ಣೆಯ ಬಳಕೆಯನ್ನು ಕನಿಷ್ಠಗೊಳಿಸಲು ಬಿಸಿಯೂಟ ತಯಾರಿ ಸಿಬಂದಿಗೆ ಕಡ್ಡಾಯವಾಗಿ ತರಬೇತಿ ನೀಡಬೇಕು. ಆರೋಗ್ಯ ಸಂಸ್ಥೆಗಳು ಮತ್ತು ಗೃಹ ವಿಜ್ಞಾನ ಕಾಲೇಜುಗಳ ಪೌಷ್ಟಿಕಾಹಾರ ತಜ್ಞರನ್ನು ಆಹ್ವಾನಿಸಿ ಕಡಿಮೆ ಎಣ್ಣೆ ಬಳಸಿ ತಯಾರಿಸಬಹುದಾದ ಪಾಕ ವಿಧಾನವನ್ನು ಎಲ್ಲರಿಗೂ ತಲುಪಿಸಬೇಕು. ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಶಾಲಾ ಮಟ್ಟದಲ್ಲಿ ರಸಪ್ರಶ್ನೆ ಆಯೋಜಿಸಿ ಬಹುಮಾನ ವಿತರಿಸಬೇಕು. ಶಾಲೆಗಳಲ್ಲಿ ವ್ಯಾಯಾಮ, ಯೋಗ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದು ಸೂಚಿಸಲಾಗಿದೆ.

You may also like