2
Sullia: ಮನೆಯೊಂದರ ಅಂಗಳಕ್ಕೆ ಇಬ್ಬರು ಅಪರಿಚಿತರು ಬಂದಿದ್ದು ಇದನ್ನು ಗಮನಿಸಿದ ಮನೆಯಲ್ಲಿದ್ದ ಮಹಿಳೆ ಕೋವಿ ಹಿಡಿದುಕೊಂಡು ಹೋದಾಗ ಇಬ್ಬರೂ ಪರಾರಿಯಾದ ಘಟನೆ ಫೆ.5 ರಂದು ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ನಡೆದಿದೆ.
ಸುಳ್ಯ ದ (Sullia) ಬಳ್ಪ ಗ್ರಾಮದ ಕುಂಜತ್ತಾಡಿ ಕೊಡಂಗುಳಿ ಸೋಮಪ್ಪ ಗೌಡ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಫೆ. 5 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾಯಿ ಬೊಗಳಿದ ಶಬ್ದ ಕೇಳಿ ಮನೆಯಲ್ಲಿದ್ದ ಮಹಿಳೆ ಹೊರಗೆ ಬಂದಾಗ ಕೊಟ್ಟಿಗೆ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದ ಎನ್ನಲಾಗಿದೆ. ಆತನೊಂದಿಗೆ ವಿಚಾರಿಸಿದಾಗ ಯಾವುದೇ ಉತ್ತರ ನೀಡದ ಕಾರಣ ಮಹಿಳೆಯು ಮನೆಯೊಳಗೆ ಹೋಗಿ ಕೋವಿ ಹಿಡಿದುಕೊಂಡು ಹೊರಗೆ ಬಂದಿದ್ದಾರೆ.
ಈ ವೇಳೆ ಸಮೀಪದಲ್ಲೇ ಮತ್ತೊಬ್ಬ ಕೂಡಾ ನಿಂತಿರುವುದು ಕಂಡು ಬಂದಿದ್ದು ಕೋವಿ ಹಿಡಿದು ಮುಂದೆ ಹೋದ ವೇಳೆ ಇಬ್ಬರೂ ಓಡಿ ಹೋಗಿದ್ದಾರೆ.
