Home » ಎಷ್ಟೇ ಪೂಜಿಸಿದರೂ ತನ್ನ ಮದುವೆಯ ಆಸೆ ಈಡೇರಿಸದ ದೇವರನ್ನೇ ಕಿಡ್ನಾಪ್ ಮಾಡಿದ ಯುವಕ !

ಎಷ್ಟೇ ಪೂಜಿಸಿದರೂ ತನ್ನ ಮದುವೆಯ ಆಸೆ ಈಡೇರಿಸದ ದೇವರನ್ನೇ ಕಿಡ್ನಾಪ್ ಮಾಡಿದ ಯುವಕ !

by ಹೊಸಕನ್ನಡ
0 comments

Marriage :ಬಹುಕನಸಿನ ಮದುವೆಯ (Marriage) ಆಸೆಯನ್ನು ತನ್ನ ಆರಾಧ್ಯ ದೈವ ಶಿವನು ಈಡೇರಿಸಲಿಲ್ಲವೆಂದು ರೊಚ್ಚಿಗೆದ್ದ ಯುವಕನೊಬ್ಬ ದೇವರನ್ನೇ ಎತ್ತಿಕೊಂಡು ಕಿಡ್ನಾಪ್ ಮಾಡಿ ಓಡಿದ ಘಟನೆ ನಡೆದಿದೆ.

 

ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಶಿವಲಿಂಗವನ್ನೇ (Shivalinga) ಕದ್ದು ಸಿಕ್ಕಿಬಿದ್ದಿದ್ದಾನೆ ಓರ್ವ ಯುವಕ. ಆತ ಭೈರೋ ಬಾಬಾ ದೇವಸ್ಥಾನದಿಂದ ಶಿವಲಿಂಗವನ್ನು ಕದ್ದೊಯ್ದಿದ್ದಾನೆ. ಇತ್ತ ಎಂದಿನಂತೆ ಭಕ್ತರು ದೇಗುಲಕ್ಕೆ ಭೇಟಿ ಕೊಟ್ಟಾಗ ಶಿವಲಿಂಗ ಮಾಯ ಆಗಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

ಊರಿನ ದೇವಳದಲ್ಲಿ ಶಿವಲಿಂಗ ನಾಪತ್ತೆಯಾಗಿರುವ ಸಂಬಂಧ ಗ್ರಾಮದ ಅಧ್ಯಕ್ಷ ಪ್ರಕಾಶ್ ಈ ಸಂಬಂಧ ಎಫ್‍ಐಆರ್ ದಾಖಲಿಸಿದ್ದಾರೆ. ಶಿವಲಿಂಗ ಕಾಣೆಯಾದ ದೂರು ಸ್ವೀಕರಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೆ ನಿನ್ನೆ, ಭಾನುವಾರ ಅಲ್ಲಿನ ಕುಮ್ಹಿಯಾವಾ ಎಂಬಲ್ಲಿಂದ ಆರೋಪಿ ಚೋಟು ಎಂಬಾತನನ್ನು ಪೊಲೀಸರು ದೇವರ ಜತೆಗೆ ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಆಸಕ್ತಿಕರ ಅಂಶ ಬೆಳಕಿಗೆ ಬಂದಿದೆ. ತಾನು ಶಿವಲಿಂಗ ಕದಿಯಲು ಕಾರಣವೇನು ಎಂಬುದನ್ನು ಕೇಳಿದ ಪೊಲೀಸರಿಗೆ ನಗುವುದಾ ಅಳುವುದಾ ಎಂದು ಆಗಿದೆ.

 

” ನಾನು ಪವಿತ್ರವಾದ ಶ್ರಾವಣ ಮಾಸದಲ್ಲಿ ಶ್ರದ್ಧೆಯಿಂದ ಪ್ರಾರ್ಥನೆ ಮತ್ತು ಉಪವಾಸ ಮಾಡುತ್ತಿದ್ದೆ. ಆದರೂ ನನ್ನ ಇಷ್ಟ ದೈವ ಶಿವನು ನನ್ನ ಮದುವೆಯ ಆಸೆ ಈಡೇರಿಸಲಿಲ್ಲ. ಹೀಗಾಗಿ ನೊಂದು ಈ ಕೆಲಸ ಮಾಡಿದ್ದೇನೆ ” ಎಂದು ಯುವಕ ಹೇಳಿದ್ದಾನೆ.ಯುವಕನು ತಾನು ಎತ್ತಿಕೊಂಡು ಹೋಗಿದ್ದ ಶಿವಲಿಂಗವನ್ನು ಬಿದಿರಿನ ರಾಶಿಯ ಅಡಿಯಲ್ಲಿ ಬಚ್ಚಿಟ್ಟಿದ್ದ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಜೈಲಿಗಟ್ಟಲಾಗಿದೆ ಎಂದು ಮಹೇವಾ ಘಾಟ್ ಪೊಲೀಸ್ ಠಾಣೆಯ ಅಧಿಕಾರಿ ರಜನಿಕಾಂತ್ ತಿಳಿಸಿದ್ದಾರೆ.

ಇದನ್ನೂ ಓದಿ : ವೇತನ ನಿಯಮದಲ್ಲಿ ಮಹತ್ವದ ಬದಲಾವಣೆ ಈ ತಿಂಗಳಿಂದಲೇ ಕೈ ಸೇರಲಿದೆ ಅಧಿಕ ವೇತನ ಸರ್ಕಾರದಿಂದ ಮಹತ್ವದ ನಿರ್ಧಾರ !!

You may also like

Leave a Comment