Home » ಬಣ್ಣದ ಮಾತಿನಿಂದ ಏಮಾರಿಸಿ ಕಳ್ಳತನ ಮಾಡೋದರಲ್ಲಿ ಎಕ್ಸ್ ಪರ್ಟ್ ಈಕೆ | ಈಕೆಯ ಕೊನೆಯ ಅಸ್ತ್ರವೇ ಸಿನಿಮಾ ಟಿಕೆಟ್, ಏನಿದು?

ಬಣ್ಣದ ಮಾತಿನಿಂದ ಏಮಾರಿಸಿ ಕಳ್ಳತನ ಮಾಡೋದರಲ್ಲಿ ಎಕ್ಸ್ ಪರ್ಟ್ ಈಕೆ | ಈಕೆಯ ಕೊನೆಯ ಅಸ್ತ್ರವೇ ಸಿನಿಮಾ ಟಿಕೆಟ್, ಏನಿದು?

0 comments

ಮಳ್ಳಿ ಮಳ್ಳಿ ಮಿಂಚುಳ್ಳಿಯ ಸ್ನೇಹ ಮಾಡಿದರೆ ಯಾಮಾರಿ ಎಲ್ಲ ಕಳೆದುಕೊಳ್ಳುವುದು ಗ್ಯಾರಂಟಿ!!!

ಕಾಲ ಬದಲಾದಂತೆ ಕಳ್ಳರು ಕೂಡ ಮಾಡರ್ನ್ ಟ್ರೆಂಡ್ಗೆ ಹೊಸ ಸ್ಟೈಲ್ ಅಪ್ಲೈ ಮಾಡಿಕೊಡು ಜನರಿಗೆ ಚಳ್ಳೆ ಹಣ್ಣು ತಿನ್ನಿಸಲು ನಾನಾ ವಿಧಾನಗಳನ್ನು ಅನುಸರಿಸುತ್ತಾರೆ. ಮೋಸ ಹೋಗುವವರಿದ್ದರೆ, ಮೋಸ ಮಾಡುವವರು ಇದ್ದೆ ಇರುತ್ತಾರೆ ಎಂಬ ಮಾತಿನಂತೆ , ಮಾತಿನಲ್ಲೇ ಜನರನ್ನು ಮರಳು ಮಾಡಿ ಸ್ನೇಹ ಸಂಪಾದಿಸಿ ಆತ್ಮಿಯರಾಗಿ ಸಂಪತ್ತನ್ನೆಲ್ಲಾ ದೋಚಿ ಬಿಡುವ ಹೊಸ ತಂತ್ರವನ್ನೂ ಇದೀಗ ಬಳಸುತ್ತಿದ್ದಾರೆ.

ಈ ರೀತಿಯ ಪ್ರಕರಣವೊಂದು ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಭ್ಯರಂತೆ ಯಾರಿಗೂ ಅನುಮಾನ ಬರದ ರೀತಿಯಲ್ಲಿ ಕಳ್ಳತನ ಮಾಡುವುದರಲ್ಲಿ ಎಕ್ಸ್ಪರ್ಟ್ ಆಗಿರುವ ಚಾಲಾಕಿ ಕಳ್ಳಿ ಜನರನ್ನು ಪರಿಚಯ ಮಾಡಿಕೊಂಡು, ಗೆಳತನದ ಸೋಗಿನಲ್ಲಿ ಆತ್ಮೀಯಳಾಗಿ ಮನೆಗೆ ಬಂದು ಹೋಗುವ ಅಭ್ಯಾಸ ಮಾಡಿಕೊಂಡು ಸಜ್ಜನ ಮಹಿಳೆಯೆಂದೇ ನಂಬಿಸಿ ಮನೆಯವರ ಅಭಿರುಚಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮನೆಯವರ ವಿಶ್ವಾಸ ಗಳಿಸಿ ಕಳ್ಳತನಕ್ಕೆ ಪ್ಲಾನ್ ರೂಪಿಸಿ ಕೊಳ್ಳುತ್ತಾಳೆ.

ಮನೆಗೆ ಅತಿಥಿಯ ರೀತಿಯಲ್ಲಿ ಆಗಾಗ ಬರುವಾಗ ಮನೆಯ ‘ಕೀ’ಯನ್ನು ನಕಲಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡು ನಕಲಿ ಕೀ ಕೈ ಸೇರುತ್ತಿದ್ದಂತೆ ಮನೆಯವರ ಇಷ್ಟಗಳ ಅರಿವು ಇರುವುದರಿಂದ ಸಿನಿಮಾ ಇಷ್ಟವಾಗಿದ್ದರೆ, ಸಿನಿಮಾದ ಟಿಕೆಟ್​ ಕೊಟ್ಟು ಇಲ್ಲವೇ ಪಾರ್ಟಿಗೋ ಒಟ್ಟಿನಲ್ಲಿ ಮನೆಯಿಂದ ಹೊರ ಹೋಗುವ ಯೋಜನೆ ರೂಪಿಸಿ, ಒಂದು ವೇಳೆ ಉಚಿತವಾಗಿ ಪಾರ್ಟಿ, ಸಿನಿಮಾ ಪಾಸ್​ ಸಿಕ್ಕಿತೆಂದು ಎಂಜಾಯ್ ಮಾಡಲು ಹೋದರೆ, ಮರಳಿ ಮನೆ ಸೇರಿದಾಗ ಸಂಪತ್ತೆಲ್ಲಾ ದರೋಡೆಯಾಗಿರುತ್ತದೆ.

ಇದೀಗ ಗೆಳತಿಯ ಸೋಗಿನಲ್ಲಿ ನಕಲಿ ಕೀ ಬಳಸಿ ದರೋಡೆ ಮಾಡುತ್ತಿದ್ದ ಅನಿತಾ ಎಂಬ ಚಾಲಾಕಿ ಮಹಿಳೆಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಹಾಗಾಗಿ ನಮ್ಮ ಸುತ್ತಮುತ್ತಲೇ ಕತರ್ನಾಕ್ ಕಳ್ಳರಿದ್ದರೂ ಗೊತ್ತಾಗದೆ ಮೋಸ ಹೋಗುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಇರುವುದು ಒಳಿತು

You may also like

Leave a Comment