Home » Theft case: 200 ರೂಪಾಯಿಗೆ ಮತಪೆಟ್ಟಿಗೆ ಕಳ್ಳತನ! ಐವರ ಬಂಧನ

Theft case: 200 ರೂಪಾಯಿಗೆ ಮತಪೆಟ್ಟಿಗೆ ಕಳ್ಳತನ! ಐವರ ಬಂಧನ

0 comments

Theft case: ಹಾವೇರಿ ಯತ್ತಿನಹಳ್ಳಿ ಹೊಸ ಬಡಾವಣೆಯ ರಸ್ತೆ ಬದಿಯ ಕಾಲುವೆಯಲ್ಲಿ 10 ಮತಪೆಟ್ಟಿಗೆಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಿ ವ್ಯಾಪಾರಿ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗುತ್ತಲ ರಸ್ತೆಯ ವಿಜಯನಗರ ಬಡಾವಣೆಯ ಸಂತೋಷ ಮಾಳಗಿ, ಯತ್ತಿನಹಳ್ಳಿಯ ಗಣೇಶ ಹರಿಜನ, ಕೃಷ್ಣ ಹರಿಜನ ಪುರದ ಓಣಿಯ ಮುತ್ತಪ್ಪ ದೇವಿಹೂಸೂರು ಮತ್ತು ಸುಭಾಷ್ ಸರ್ಕಲ್ ಮಕಾನಗಲ್ಲಿಯ ಮಹಮ್ಮದ್ ಜಾವೀದ್‌ ಮಕಾನದಾರ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ಪೊಲೀಸರು 17 ಮತಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದು. ಮತಪೆಟ್ಟಿಗೆ ಕಳವು ಕುರಿತು ತಹಶೀಲ್ದಾ‌ರ್ ಕಚೇರಿ ಅಧಿಕಾರಿ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಎಪಿಎಂಸಿಯಲ್ಲಿ ಕೂಲಿ ಕಾರ್ಮಿಕರಾಗಿದ್ದ ಈ ಆರೋಪಿಗಳು ಮದ್ಯವ್ಯಸನಿಗಳು ಆಗಿದ್ದ ಕಾರಣ, ಗೋದಾಮಿನಲ್ಲಿ ಕಬ್ಬಿಣದ ಪೆಟ್ಟಿಗೆಗಳನ್ನು ಕಳವು (Theft case)ಮಾಡಿ, ಗುಜರಿಗೆ ಮಾರಲು ಸಂಚು ರೂಪಿಸಿದ್ದರು. ಆದರೆ, ಅವು ಮತಪೆಟ್ಟಿಗೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಕುಡಿಯಲು ಕಾಸು ಬೇಕೆಂದು ಗೋದಾಮಿನ ಬಾಗಿಲು ಮೀಟಿ ಎರಡು ಬಾರಿ ಒಳಗೆ ನುಗ್ಗಿದ್ದ ಆರೋಪಿಗಳು, 17 ಮತಪೆಟ್ಟಿಗೆಗಳನ್ನು ಕದ್ದು, ಗುಜರಿ ವ್ಯಾಪಾರಿ ಮಹಮ್ಮದ್ ಜಾವೀದ್ ಮಕಾನದಾರ ಬಳಿ ಒಯ್ದಿದ್ದರು. ನಂತರ ಆತನ ಮನವೊಲಿಸಿ ತಲಾ ಒಂದು ಮತಪೆಟ್ಟಿಗೆಯನ್ನು ₹ 200ಕ್ಕೆ ಮಾರಾಟ ಮಾಡಿ ₹ 3,400 ಪಡೆದಿದ್ದರು. ಅದೇ ಹಣದಲ್ಲಿ ಮದ್ಯ ಕುಡಿದಿದ್ದರು’ ಎಂದು ಅವರು ತಿಳಿಸಿದ್ದಾರೆ.

You may also like

Leave a Comment