High Security Tree: ಸಾಮಾನ್ಯವಾಗಿ ನಾವು Z ಪ್ಲಸ್ ಸೆಕ್ಯುರಿಟಿ ಬಗ್ಗೆ ಕೇಳಿದಾಗ, ಪ್ರಧಾನಿ, ರಾಷ್ಟ್ರಪತಿ ಮತ್ತು ಯಾವುದೇ ವಿವಿಐಪಿ ವ್ಯಕ್ತಿಯ ಸುರಕ್ಷತೆ ನೆನಪಿಗೆ ಬರುತ್ತದೆ. ದೇಶದ ಯಾವುದೇ ದೊಡ್ಡ ಸೆಲೆಬ್ರಿಟಿ ಅಥವಾ ಉದ್ಯಮಿಗಳಿಗೂ ಅಗತ್ಯವಿದ್ದಾಗ ಈ ಸೆಕ್ಯುರಿಟಿ ನೀಡಲಾಗುತ್ತದೆ. ಆದರೆ ಒಂದು ಮರಕ್ಕೆ 24 ಗಂಟೆ ಝಡ್ ಪ್ಲಸ್ (Z+ security) ಸೆಕ್ಯುರಿಟಿ ನೀಡಲಾಗುತ್ತದೆ ಅನ್ನೋದು ನಿಮಗೆ ಗೊತ್ತಾ? ಇದು ನಂಬಲು ನಿಮಗೆ ಸಾಧ್ಯವಾಗದಿರಬಹುದು. ಆದ್ರೆ ಇದು ಸತ್ಯ!!
ಹೌದು, ನಮ್ಮ ಭಾರತದಲ್ಲಿ ವಿವಿಐಪಿ(VVIP) ಮರವೂ ಇದೆ. ಅದರ ಸುರಕ್ಷತೆಗಾಗಿ 24 ಗಂಟೆ ಗಾರ್ಡ್‌ಗಳು ನೇಮಕ ಆಗಿರುತ್ತಾರೆ. ಭಾರತದಲ್ಲಿ ಭಾರೀ ಚರ್ಚೆಯಲ್ಲಿರುವ ಹೈ ಸೆಕ್ಯುರಿಟಿ ಮರ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಮತ್ತು ವಿದಿಶಾ ನಡುವಿನ ಸಲಾಮತ್‌ಪುರ ಬೆಟ್ಟಗಳಲ್ಲಿದೆ. ಈ ವಿಶೇಷ ಮರವನ್ನು ಶ್ರೀಲಂಕಾದ ಅಂದಿನ ಪ್ರಧಾನಿ ಮಹಿಂದ್ರ ರಾಜಪಕ್ಸೆ 2012ರಲ್ಲಿ ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ನೆಟ್ಟರು ಎಂದು ಹೇಳಲಾಗುತ್ತದೆ.
ಭಾರತೀಯ ಇತೊಹಾಸ ತಜ್ಞರು ಹೇಳುವಂತೆ ಗೌತಮ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷವು 1857ರ ನೈಸರ್ಗಿಕ ವಿಕೋಪದಿಂದ ನಾಶವಾಯಿತು ಎಂದು ಹೇಳುತ್ತಾರೆ. ನಂತರ 1880ರಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಕನ್ನಿಂಗ್ ಹ್ಯಾಮ್ ಶ್ರೀಲಂಕಾದ ಅನುರಾಧಪುರಂನಿಂದ ಬೋಧಿ ವೃಕ್ಷದ ಒಂದು ಕೊಂಬೆಯನ್ನು ತಂದು ಬೋಧಗಯಾದಲ್ಲಿ ಮತ್ತೆ ನೆಟ್ಟರು. ಅದು ನಂತರ ಭಾರತದ ಬೋಧಿ ವೃಕ್ಷವಾಗಿ ಒಂದು ಅವಧಿವರೆಗೆ ಬೆಳೆಯುತ್ತದೆ.
ಇನ್ನು ಈ ಮರ ತುಂಬಾ ಅಮೂಲ್ಯವಾದುದರಿಂದ ಮಧ್ಯಪ್ರದೇಶ ಸರ್ಕಾರ ಇದರ ಸುರಕ್ಷತೆಗಾಗಿ ವಾರ್ಷಿಕ ಸುಮಾರು 12 ರಿಂದ 15 ಲಕ್ಷ ರೂಪಾಯಿ ಖರ್ಚು ಮಾಡುತ್ತದೆ. ಈ ಮರ 100 ಎಕರೆ ವಿಸ್ತೀರ್ಣದ ಬೆಟ್ಟದ out ಮೇಲೆ 15 ಅಡಿ ಎತ್ತರದ ಕಬ್ಬಿಣದ ಬೇಲಿಗಳ ಒಳಗೆ ಇದೆ ಎಂದು ಹೇಳಲಾಗುತ್ತದೆ. ಇದನ್ನು ಬೋಧಿ ವೃಕ್ಷ ಎಂದು ಕರೆಯುತ್ತಾರೆ. ಮಧ್ಯ ಪ್ರದೇಶದಲ್ಲಿರುವ ಬೋಧಿ ವೃಕ್ಷದ ಮೇಲ್ವಿಚಾರಣೆಯನ್ನು ಡಿಎಂ (ಜಿಲ್ಲೆಯ ಅಧಿಕಾರಿ) ಸ್ವತಃ ಮಾಡುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಈ ಮರಕ್ಕೆ ನೀರುಣಿಸಲು ಪ್ರತ್ಯೇಕ ನೀರಾವರಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಕೃಷಿ ಇಲಾಖೆಯ ಅಧಿಕಾರಿಗಳು ಸಹ ಸಮಯ ಸಮಯಕ್ಕೆ ಇಲ್ಲಿಗೆ ಭೇಟಿ ನೀಡುತ್ತಾರೆ. ಸಧ್ಯ ಈ ಮರದ ಸೆಕ್ಯೂರಿಟಿಗೆ ಸರ್ಕಾರದಿಂದ ಝಡ್ ಪ್ಲಸ್ ಸೆಕ್ಯೂರಿಟಿಯನ್ನು ಒದಗಿಸಲಾಗಿದೆ. ದಿನದ 24 ಗಂಟೆಯೂ ಈ ಮರವನ್ನು ಕಾಯಲಾಗುತ್ತಿದೆ.
