ಮಂಗಳೂರು: ಸಿಎಂ ಆಗ್ಲಿಕ್ಕೆ ಅರ್ಜೆಂಟ್ ಏನೂ ಇಲ್ಲ, 20 ವರ್ಷ ಆದ ಬಳಿಕ, ಮತದಾರರು 4 ಬಾರಿ ಗೆಲ್ಲಿಸಿ ಕಳುಹಿಸಿದ ಬಳಿಕ ನೋಡೋಣ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಜ.3ರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಾದರ್, ನೀವು ಸಿಎಂ ಆಕಾಂಕ್ಷಿಯೇ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಿಎಂ 4ಆಗಲಿಕ್ಕೆ ಅರ್ಜೆಂಟ್ ಎಂಥ ಇಲ್ಲ. 20 ವರ್ಷ ಬಾಳಿಕೆ ನೋಡುವ ಅಂದಿದ್ದಾರೆ.
ಅವರು ಈ ಸಂದರ್ಭ ಬಳ್ಳಾರಿ ಪ್ರಕರಣದ ಬಗ್ಗೆ ಮಾತನಾಡಿ, ಶಾಸಕರು ಸಿನಿಮೀಯ ರೀತಿಯಲ್ಲಿ ಕಚ್ಚಾಡುವುದು ಸರಿಯಲ್ಲ, ಕೆಲ ಜನಪ್ರತಿನಿಧಿಗಳ ನಡವಳಿಕೆಯಿಂದ ಸಾರ್ವಜನಿಕರು ಇತರರನ್ನು ಅದೇ ರೀತಿ ನೋಡುತ್ತಾರೆ ಎಂದರು.
ಸಾಂಪ್ರದಾಯಿಕ ಕೋಳಿ ಅಂಕ ಸಮಸ್ಯೆಗೆ ಸೂಕ್ತ ನಿಯಮ ರೂಪಿಸುವ ಅಗತ್ಯವಿದೆ. ನಾನು ಕೂಡ ಸಲಹೆ ನೀಡಿದ್ದು, ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
