Kanyakumari: ‘ನಿನ್ನ ಗಂಡನ ಆರೋಗ್ಯ ಸರಿ ಇಲ್ಲ, ಆತನ ವೀರ್ಯದಲ್ಲಿ ವಿಷವಿದೆ. ಹಾಗಾಗಿ ನೀನು ನನ್ನ ಜೊತೆ ಮಲಗು’ ಎಂದು ವಿವಾಹಿತ ಮಹಿಳೆಯೊಬ್ಬಳೇಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಕ್ರೈಸ್ತ ಪಾದ್ರಿ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ವಿವಾಹಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪದಡಿ ಕನ್ಯಾಕುಮಾರಿ ಪೊಲೀಸರು ಪೆಂಟೆಕೊಸ್ಟಲ್ ಚರ್ಚ್‌ನ ಪಾದ್ರಿಯೊಬ್ಬರನ್ನು ಬಂಧಿಸಿದ್ದಾರೆ. ಈತ ಮಹಿಳೆಯ ಅನಾರೋಗ್ಯವನ್ನು ಗುಣಪಡಿಸುವುದಾಗಿ ಹೇಳಿ ಆಕೆಯ ಜೊತೆ ಸಂಬಂಧ ಹೊಂದಲು ಯತ್ನಿಸಿದ್ದಾನೆ.
ಅಂದಹಾಗೆ ಸಂತ್ರಸ್ತ ಯುವತಿ ಕೆಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಚಿಕಿತ್ಸೆಯ ನಿರೀಕ್ಷೆಯಲ್ಲಿ ಮೆಕ್ಕಮಂಡಪಂ ಪ್ರದೇಶದ ಫುಲ್ ಗಾಸ್ಪೆಲ್ ಪೆಂಟೆಕೊಸ್ಟಲ್ ಚರ್ಚ್‌ಗೆ ಹೋಗಿದ್ದಳು. ಅಲ್ಲಿನ ಪಾದ್ರಿ ರೆಜಿಮೋನ್ ಖಾಸಗಿ ಪ್ರಾರ್ಥನೆಯ ಮೂಲಕ ಆಕೆಯನ್ನು ಗುಣಪಡಿಸಬಲ್ಲೆ ಎಂದು ನಂಬಿಸಿದ್ದ. ಅದರಂತೆ ಪ್ರಾರ್ಥನೆಗೆ ಹೆಸರಲ್ಲಿ ಬಲವಂತ ಮಾಡಲು ಶುರು ಮಾಡಿದ್ದ ಪಾದ್ರಿ. ಅಲ್ಲದೆ ಆ ಮಹಿಳೆಗೆ ಆತ ‘ನಿನ್ನ ಆರೋಗ್ಯ ಸಮಸ್ಯೆಗಳು ನಿನ್ನ ಗಂಡನ ಜೊತೆಗಿನ ನಿನ್ನ ಸಂಬಂಧದಿಂದಾಗಿವೆ. ನಿನ್ನ ಗಂಡನ ವೀರ್ಯದಲ್ಲಿ ವಿಷ ಇದೆ. ನನ್ನ ಜೊತೆ ಮಲಗು. ನೀನು ನನ್ನಂಥ ಪಾದ್ರಿಯ ಜೊತೆ ಮಲಗಿದರೆ ಗುಣಮುಖಳಾಗುತ್ತೀಯ’ ಎಂದು ಹೇಳಿದ್ದಾನೆ.
ಪ್ರಾರ್ಥನೆ ಹೆಸರಿನಲ್ಲಿ ಪಾದ್ರಿ ಆಕೆಯನ್ನು ಅಪ್ಪಿಕೊಂಡು ಬಲವಂತ ಮಾಡಲು ಯತ್ನಿಸಿದ. ಆದರೆ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಬಳಿಕ ತುಕ್ಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಮೇರೆಗೆ ಪೊಲೀಸರು ಪಾದ್ರಿ ರೆಜಿಮೋನ್‌ನನ್ನು ಜೂನ್ 26, 2025 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Suicide: ಮಣಿಪಾಲ: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ!
