Sumalatha: ದರ್ಶನ್ ಇನ್ಸ್‌ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸುಮಲತಾ ಪಬ್ಲಿಕ್ ಟಿವಿಗೆ ಸ್ಪಷ್ಟನೆ ಕೊಟ್ಟಿರುವ ಕುರಿತು ವರದಿಯಾಗಿದೆ. ದರ್ಶನ್ ಯಾವತ್ತಿದ್ದರೂ ನನ್ನ ಮಗ, ನಾನು ಹಂಚಿಕೊಂಡಿರುವ ಪೋಸ್ಟ್‌ಗೂ ಅವರಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಸುಮಲತಾ ಅವರು ದರ್ಶನ್ ಅನ್‌ಫಾಲೋ ಮಾಡಿದ್ದಕ್ಕೆ ತಮ್ಮ ಸ್ಟೇಟಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದರೆನ್ನಲಾಗಿರುವ ಕುರಿತು ವರದಿಯಾಗಿತ್ತು. ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತ್ತು. ಈ ಕುರಿತು ಪಬ್ಲಿಕ್ ಟಿವಿ ಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ʼಇದೆಲ್ಲ ಅನಗತ್ಯವಾದ ವಿವಾದ. ಯಾರು ನನ್ನನ್ನು ಫಾಲೋ ಮಾಡ್ತಾರೆ, ಅನ್‌ಫಾಲೋ ಮಾಡ್ತಾರೆ ಎಂಬುವುದನ್ನು ಗಮನಿಸುವ ಅಭ್ಯಾಸವಿಲ್ಲ. ನನಗೆ ಅಷ್ಟು ಸಮಯವೂ ಇಲ್ಲ, ಮಾಧ್ಯಮಗಳಲ್ಲಿ ಈ ವಿಷಯದ ಕುರಿತು ಸುದ್ದಿ ಬಂದ ಬಳಿಕವೇ ನನಗೆ ಇದೆಲ್ಲ ತಿಳಿಯಿತು ಎಂದು ಹೇಳಿರುವ
ನಾನು ಮಾಡಿರುವ ಪೋಸ್ಟ್ ಜನರಲ್ ಪೋಸ್ಟ್. ಯಾರನ್ನೋ ಟಾರ್ಗೆಟ್ ಮಾಡಿ, ಯಾರನ್ನೋ ಉದ್ದೇಶಿಸಿ ಪೋಸ್ ಹಾಕಲ್ಲ. ದರ್ಶನ್ ಯಾವತ್ತಿದ್ದರೂ ನನ್ನ ಮಗ. ಅವತ್ತಿಗೂ ಅಷ್ಟೇ. ಇವತ್ತಿಗೂ ಅಷ್ಟೇ. ನನ್ನ ಪ್ರೀತಿ ಅಭಿಮಾನ ಯಾವತ್ತಿಗೂ ಒಂದೇ ತರಹ ಇರುತ್ತದೆ. ಆ ಪೋಸ್ಟ್‌ಗೂ ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
