Home » Isha Foundation: ಶಿವನ ನೆಲೆಯಾಗಿರುವ ಈಶ ಫೌಂಡೇಶನ್‌ ಬಗ್ಗೆ ನಿಮಗೆ ತಿಳಿಯದ ವಿಷ್ಯವಿದೆ!

Isha Foundation: ಶಿವನ ನೆಲೆಯಾಗಿರುವ ಈಶ ಫೌಂಡೇಶನ್‌ ಬಗ್ಗೆ ನಿಮಗೆ ತಿಳಿಯದ ವಿಷ್ಯವಿದೆ!

0 comments

Isha Foundation: ಚಿಕ್ಕಬಳ್ಳಾಪುರ ಬಳಿ ಇರುವ ಈಶ ಫೌಂಡೇಶನ್‌ (Isha Foundation) ಇತ್ತೀಚಿಗೆ ಪ್ರಸಿದ್ಧಿ ಪಡೆದ ಐತಿಹಾಸಿಕ ಸ್ಥಳವಾಗಿದೆ. ಮಹಾಶಿವನ ಭಕ್ತರಂತೂ ಈ ಜಾಗಕ್ಕೆ ಹೋಗಲು ಹೆಚ್ಚಾಗಿ ಇಷ್ಟ ಪಡುತ್ತಾರೆ. ಒಟ್ಟಾರೆ ಇಲ್ಲಿ ಯಾವಾಗಲು ಭಕ್ತಿಯ ಪಾಸಿಟಿವ್ ವೈಬ್ ಇರುತ್ತೆ ಅನ್ನೋದು ಸತ್ಯ.

ಇನ್ನು ಶಿವನ ನೆಲೆಯಾಗಿರುವ ಈ ಜಾಗದಲ್ಲಿ ಮಾಂಸಾಹಾರಕ್ಕೆ ಅವಕಾಶ ನೀಡಲಾಗಿಲ್ಲ. ಹಾಗಾಗಿ ಈಶ ಫೌಂಡೇಶನ್‌ ಸುತ್ತಮುತ್ತಲೂ ಯಾವುದೇ ಮಾಂಸಾಹಾರದ ಹೋಟೆಲ್‌ಗಳೂ ಇಲ್ಲ. ಆದರೆ, ಇದೀಗ ಇಲ್ಲಿ ಗುಂಡು ತುಂಡು ಪಾರ್ಟಿ ನಡೆಯುತ್ತೆ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೊಂದು ಸಾಕ್ಷಿಯು ಇದೆ.

ಹೌದು, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, ಈಶ ಫೌಂಡೇಷನ್‌ಗೆ ಸೇರಿದ ಜಾಗದಲ್ಲಿ ಕೆಲವರು ಪುಂಡರು ಚಿಕನ್‌ ಬಿರಿಯಾನಿ ತಯಾರಿಸಿ, ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಇಲ್ಲಿನ ಪಾರ್ಕಿಂಗ್‌ ಪ್ರದೇಶಕ್ಕೆ ಐದಾರು ಮಂದಿ ಅಕ್ರಮವಾಗಿ ಪ್ರವೇಶಿಸಿದ್ದು, ಮಧ್ಯಾಹ್ನ ಇನ್ನೂ ಕೆಲವರ ಜೊತೆ ಬಂದು ಪಾರ್ಕಿಂಗ್‌ ಸ್ಥಳದ ಸಮೀಪದಲ್ಲೇ ದೇವಸ್ಥಾನದ ಬಳಿಯಿದ್ದ ಕಸ ಕಡ್ಡಿಯನ್ನು ತಂದು ಬೆಂಕಿ ಹಚ್ಚಿದ್ದರು. ಬಳಿಕ ಅಲ್ಲಿಯೇ ಚಿಕನ್ ಬಿರಿಯಾನಿ ಕೂಡ ತಯಾರಿಸಿದ್ದರು. ಇದೇ ಜಾಗದ ಸಮೀಪದಲ್ಲಿ ಆದಿಯೋಗಿಯ ಬೃಹತ್‌ ಮೂರ್ತಿ, ನಂದಿ, ಮಹಾಶೂಲ ಹಾಗೂ ನಾಗಮಂಟಪ, ಯೋಗೇಶ್ವರಲಿಂಗ ಇತ್ತು ಎನ್ನಲಾಗಿದೆ. ಇದೀಗ ಈ ಕಿಡಿಗೇಡಿಗಳ ವಿರುದ್ಧ ಈಶ ಫೌಂಡೇಶನ್‌ ಸಿಬ್ಬಂದಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ಗೆ ದೂರು ನೀಡಲಾಗಿದೆ ಎನ್ನಲಾಗಿದೆ.

You may also like

Leave a Comment