Home » Kuduremukha: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಮೇ 1ರಿಂದ ಈ ರೂಲ್ಸ್ ಕಡ್ಡಾಯ!

Kuduremukha: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಮೇ 1ರಿಂದ ಈ ರೂಲ್ಸ್ ಕಡ್ಡಾಯ!

0 comments

Kuduremukha: ಮೇ 1ರಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್‌ ಬಾಟಲಿಯ ಬಳಕೆಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ.

ಈ ಕುರಿತು ಕುದುರೆಮುಖ (Kuduremukha) ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು ಪ್ರವಾಸಿಗರು ಯಾವುದೇ ಪ್ಲಾಸ್ಟಿಕ್ ಬಾಟಲಿ ತೆಗೆದುಕೊಂಡು ಹೋಗುವುದಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದ್ದು ವಾಹನದಲ್ಲಿರುವ ಯಾವುದೇ ಪ್ಲಾಸ್ಟಿಕ್ ಬಾಟಲಿಗಳನ್ನು ತನಿಖಾ ಠಾಣೆಯಲ್ಲಿ ನಿರ್ಮಿಸಲಾಗಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಹಾಕಿ ಪ್ರಯಾಣ ಮುಂದುವರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಉದ್ಯಾನವನದಲ್ಲಿ ಹಾದುಹೋಗಿರುವ ರಸ್ತೆಗಳಲ್ಲಿ ಇರುವ ಮುಳ್ಳೂರು ತನಿಖಾ ಠಾಣೆ, ಬಸಿಕಲ್ಲು ತನಿಖಾ ಠಾಣೆ, ಹಾಗೂ ತನಿಕೋಡು ತನಿಖಾ ಠಾಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು ಪ್ರವಾಸಿಗರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

You may also like