Tiruvanathapuram: ಕೇರಳ ವಿಶೇಷ ಪೋಕ್ಸೋ ನ್ಯಾಯಾಲಯವು 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಪೊಂದನ್ನು ಪ್ರಕಟ ಮಾಡಿದೆ.
ಪೋಕ್ಸೋ ಕೇಸಲ್ಲಿ ಬಾಲಕಿ ತಾಯಿ ಮತ್ತು ಆಕೆಯ ಪ್ರೇಮಿಗೆ 180 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪತಿಯಿಂದ ದೂರವಾಗಿ ಮಹಿಳೆ ಪ್ರಿಯಕರನ ಜೊತೆಗಿದ್ದು, ಎರಡು ವರ್ಷಗಳಿಂದ ಪ್ರೇಮಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಮಾತ್ರವಲ್ಲದೇ ಇದರಲ್ಲಿ ಮಗಳ ಮೇಲೆ ಅತ್ಯಾಚಾರ ಮಾಡಲು ಮಹಿಳೆ ಸಾಥ್ ನೀಡಿದ್ದಳು. ಆರೋಪಿಗಳಿಗೆ ಶಿಕ್ಷೆ ವಿಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಶ್ರಫ್ ಎ ಎಂ ಆದೇಶ ಹೊರಡಿಸಿದೆ. ಪೋಕ್ಸೋ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ದೋಷಿಗಳು ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ಪ್ರತಿ ವಿಭಾಗದ ಅಡಿಯಲ್ಲಿ 40 ವರ್ಷಗಳ ಕಠಿಣ ಜೈಲು ಶಿಕ್ಷೆ, 2 ಲಕ್ಷ ರೂ ದಂಡವನ್ನು ನ್ಯಾಯಾಲಯವು ನೀಡಿದೆ. ದಂಡದ ಮೊತ್ತ ಪಾವತಿ ಮಾಡದಿದ್ದರೆ ಇಬ್ಬರೂ ಹೆಚ್ಚುವರಿಯಾಗಿ 20 ತಿಂಗಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪೋಕ್ಸೋ ಕಾಯ್ದೆಯಡಿ ಮಹಿಳೆಗೆ ನೀಡಲಾಗುವ ಅತ್ಯಂತ ಕಠಿಣ ಶಿಕ್ಷೆ ಇದು ಎಂದು ಹೇಳಲಾಗಿದೆ.
