ಚಿಕ್ಕೋಡಿ: ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಾಂಕ್ ಪಡೆದು ಖಾಸಗಿ ಶಾಲೆಯ ವಿದ್ಯಾರ್ಥಿಗಳ ಮುಂದೆ ಸರಕಾರಿ ಶಾಲೆಗಳು ಯಾವುದರಲ್ಲೂ ಕಮ್ಮಿ ಇಲ್ಲ ಎಂದು ಸಾಬೀತು ಮಾಡಿವೆ.
ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಕಾವೇರಿ ಮಲಪೂರೆ ಪಿಯುಸಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ 594 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಪಡೆದು ಚಿಕ್ಕೋಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಉತ್ತರ ಕರ್ನಾಟಕದ ಗಡಿ ಭಾಗದ ಶಿಕ್ಷಣ ಕಾಶಿ ಎಂದೇ ಪ್ರಸಿದ್ದ ಮಜಲಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಲಾ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ದ್ವಿತೀಯ ಪಿಯು ಪರೀಕ್ಷೆಯ ಕನ್ನಡ-99, ಇಂಗ್ಲಿಷ್-97, ಅರ್ಥಶಾಸ್ತ್ರದಲ್ಲಿ 100, ಇತಿಹಾಸ-99, ರಾಜ್ಯಶಾಸ್ತ್ರ-99, ಸಮಾಜಶಾಸ್ತ್ರ-100 ಅಂಕಗಳನ್ನು ಪಡೆದುಕೊಂಡಿದ್ದಾಳೆ.
ಈ ಸಾಧಕ ವಿದ್ಯಾರ್ಥಿನಿಯ. ಕಠಿಣ ಪರಿಶ್ರಮ ಮತ್ತು ಸಾಧನೆಗೆ ಶಾಸಕ ದುರ್ಯೋಧನ ಐಹೊಳೆ, ಕಾಲೇಜಿನ ಪ್ರಾಚಾರ್ಯ ಪ್ರೊ.ಆನಂದ ಕೋಳಿ, ಶಿಕ್ಷಣ ಪ್ರೇಮಿ ರುದ್ರಪ್ಪ ಸಂಗಪ್ಪಗೋಳ ಮತ್ತು ಉಪನ್ಯಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
