Home » Muslim woman: ಈ ಭೂಮಿ ನಿಜಾಮರಿಗೆ ಮಾತ್ರ ಸೇರಿದ್ದು! ಮುಸ್ಲಿಂ ಮಹಿಳೆಯ ಹೇಳಿಕೆ: ವಿಡಿಯೋ ವೈರಲ್

Muslim woman: ಈ ಭೂಮಿ ನಿಜಾಮರಿಗೆ ಮಾತ್ರ ಸೇರಿದ್ದು! ಮುಸ್ಲಿಂ ಮಹಿಳೆಯ ಹೇಳಿಕೆ: ವಿಡಿಯೋ ವೈರಲ್

0 comments

Muslim woman: ಈ ಭೂಮಿ ನಿಜಾಮರಿಗೆ ಮಾತ್ರ ಸೇರಿದ್ದು! ಮುಸ್ಲಿಂ ಮಹಿಳೆ (Muslim woman) ಹೇಳಿಕೆ ನೀಡಿದ್ದಾಳೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಹೌದು, ವಿಧಾನಸಭೆ ಚುನಾವಣೆಯ ನಿಮಿತ್ತ ಮಹಾರಾಷ್ಟ್ರದಲ್ಲಿ ನಡೆದ ಓವೈಸಿ ರ‍್ಯಾಲಿಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾಳೆ. ಇದು ಔರಂಗಬಾದ್‌ ನಗರ ಇದರ ಹೆಸರನ್ನು ಸಂಭಾಜಿ ನಗರ ಎಂದು ಬದಲಾಯಿಸಲು ನೀವ್ಯಾರು? ಈ ಭೂಮಿ ನಿಜಾಮರಿಗೆ ಸೇರಿದ್ದು ಎಂದು ತನ್ನ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಹಿಳೆಯ ಈ ಮಾತಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ನವೆಂಬರ್‌ 20 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಹಾರಾಷ್ಟ್ರದಲ್ಲಿ ರಾಜಕೀಯ ಕಾವು ಜೋರಾಗಿದೆ. ಜೊತೆಗೆ ರಾಜಕೀಯ ಪಕ್ಷಗಳು ಭರ್ಜರಿ ಚುನಾವಣಾ ಪ್ರಚಾರದಲ್ಲೂ ತೊಡಗಿವೆ. ಇದೀಗ ಒವೈಸಿ ಪ್ರಚಾರ ರ‍್ಯಾಲಿಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಮಹಿಳೆಯ ಈ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತ ವಿಡಿಯೋವನ್ನು MeghUpdates ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸಂಭಾಜಿ ಮಹಾರಾಜರು ಯಾರು? ಔರಂಗಬಾದ್‌ನ ಹೆಸರನ್ನು ಬದಲಾಯಿಸಲು ನೀವು ಯಾರು ಈ ಭೂಮಿ ನಿಜಾಮರದ್ದು; ಮಹರಾಷ್ಟ್ರದ ಓವೈಸಿ ರ‍್ಯಾಲಿಯಲ್ಲಿ ಹೇಳಿಕೆ ನೀಡಿದ ಮುಸ್ಲಿಂ ಮಹಿಳೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್‌ ವಿಡಿಯೋದಲ್ಲಿ ಸಂಭಾಜಿ ಮಹರಾಜ ಯಾರು? ಜೌರಂಗಬಾದ್‌ ಹೆಸರನ್ನು ಬದಲಾಯಿಸಲು ನೀವು ಯಾರು? ಬಂಜರು ನಗರವಾಗಿದ್ದ ಈ ಭೂಮಿಯನ್ನು ಅಭಿವೃದ್ಧಿ ಮಾಡಿದ್ದು ಮಲಿಕ್‌ ಅಂಬರ್.‌ ನೀವು ಇತಿಹಾಸವನ್ನು ಹೇಗೆ ಬದಲಾಯಿಸುತ್ತೀರಿ? ಈ ಭೂಮಿ ನಿಜಾಮರದ್ದು ಎಂದು ಮಹಿಳೆಯೊಬ್ಬರು ಭಾಷಣದಲ್ಲಿ ಕಿರುಚಾಡುತ್ತಾ ವಿವಾದಾತ್ಮಕ ಹೇಳಿಕೆನ್ನು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.

ಈ ವಿಡಿಯೋ ನೋಡಿದ ಒಬ್ಬ ಬಳಕೆದಾರರು ʼಈ ಭೂಮಿ ಹಿಂದೂಸ್ಥಾನಕ್ಕೆ ಸೇರಿದ್ದು ಎಂಬ ಇತಿಹಾಸವನ್ನು ಮೊದಲು ಈಕೆ ತಿಳಿಯಲಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸರಿಯಾಗಿ ಮುಖ ತೋರಿಸಲು ಸಾಧ್ಯವಾಗದ ಜನರ ಹೇಳಿಕೆಗೆ ಇಲ್ಲಿ ಬೆಲೆ ಇಲ್ಲʼ ಎಂದು ಹೇಳಿದ್ದಾರೆ.

https://twitter.com/kishorkarhale82/status/1854406137522848242

 

You may also like

Leave a Comment