9
Moharam Holiday : ಜುಲೈ 6 ಮತ್ತು 7 ರಂದು ಮೊಹರಂ ಹಬ್ಬ. ಈ ಬಾರಿ ಮೊಹರಂ ಹಬ್ಬವು ಎರಡು ದಿನ ಬಂದಿರುವ ಕಾರಣ ಶಾಲಾ ಕಾಲೇಜುಗಳಿಗೆ ಯಾವ ದಿನ ರಜೆ ಸಿಗಲಿದೆ ಎಂಬುದು ಹಲವರ ಗೊಂದಲ ವಿಚಾರವಾಗಿದೆ. ರಜ ಯಾವತ್ತು ಎಂಬ ಮಾಹಿತಿ ಇಲ್ಲಿದೆ.
ಇಸ್ಲಾಮಿಕ್ ಹೊಸ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ಅನ್ನು ದೇಶದಲ್ಲಿ ಜುಲೈ 6 ಅಥವಾ 7 ರಂದು ಆಚರಣೆ ಮಾಡಲಾಗುತ್ತದೆ. ಮೊಹರಂ ಚಂದ್ರನ ದರ್ಶನದ ಮೇಲೆ ನಿರ್ಧಾರವಾಗಲಿದೆ. ಪ್ರಸ್ತುತ ಜುಲೈ 6ರಂದು ಮೊಹರಂ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಜೂನ್ 6ರಂದು ಚಂದ್ರ ದರ್ಶನ ಆಗದಿದ್ದರೆ, ರಜಾ ದಿನವು ಜುಲೈ 7ಕ್ಕೆ ಮುಂದೂಡಿಕೆ ಆಗುವ ಸಾಧ್ಯತೆಯಿದೆ.
ಮೊಹರಂ ಹಬ್ಬ ಹಿನ್ನೆಲೆ ದೇಶಾದ್ಯಂತ ಶಾಲಾ ಕಾಲೇಜು-ಸರ್ಕಾರಿ ಕಚೇರಿ, ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದ್ದರಿಂದ ಈ ಬಾರಿ ಮೊಹರಂ ಜುಲೈ 6ರ ಬದಲು 7ರಂದು ನಡೆದರೆ ಅಂದು ಸಾರ್ವಜನಿಕ ರಜೆ ಇರಲಿದೆ.
