Home » Bhramanda Guruji: ‘ಈ ವರ್ಷವೇ ಕೊನೆ, ಮುಂದಿನ ವರ್ಷದಿಂದ ಇರಲ್ಲ ಹಾಸನಾಂಬೆ ಸಾನಿಧ್ಯ’ – ಕುರಿತು ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ

Bhramanda Guruji: ‘ಈ ವರ್ಷವೇ ಕೊನೆ, ಮುಂದಿನ ವರ್ಷದಿಂದ ಇರಲ್ಲ ಹಾಸನಾಂಬೆ ಸಾನಿಧ್ಯ’ – ಕುರಿತು ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ

0 comments

Bhramanda Guruji : ನಾಡಿನ ಖ್ಯಾತ ಜ್ಯೋತಿಷ್ಯರಲ್ಲಿ ಒಬ್ಬರಾಗಿರುವ ಬ್ರಹ್ಮಾಂಡ ಗುರೂಜಿಯವರು ಇದೀಗ ಹಾಸನದ ಅಧಿದೇವತೆ ಹಾಸನಾಂಬೆಯ ಕುರಿತು ಭಯಾನಕ ಭವಿಷ್ಯ ನುಡಿದಿದ್ದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ.

ಹೌದು, ಬ್ರಹ್ಮಾಂಡ ಗುರೂಜಿ ಅವರು ಹಾಸನಾಂಬೆ ದೇಗುಲದ ಕುರಿತು ಆಘಾತಕಾರಿ ಭವಿಷ್ಯ ನುಡಿದಿದ್ದು, ಈ ವರ್ಷ ಹಾಸನಾಂಬೆಗೆ ಕೊನೆಯ ವರ್ಷವಾಗಿದ್ದು, ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲಿ ಇರಲ್ಲ. ಹಾಸನಾಂಬೆ ದರ್ಶನಕ್ಕೆ ಮುಂದಿನ ದಿನಗಳಲ್ಲಿ ಅವಕಾಶಗಳು ಅಡಚಣೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು ಸಿದ್ದೇಶ್ವರನ ಕೃಪಾಶೀರ್ವಾದದಿಂದ ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಗಳು ನಡೆಯಲಿವೆ. ರೇವಣ ಸಿದ್ದೇಶ್ವರ, ಹಾಸನದ ಸಿದ್ದೇಶ್ವರ, ಜೇನುಕಲ್ ಸಿದ್ದೇಶ್ವರ ಸೇರಿದಂತೆ ವಿವಿಧ ಸಿದ್ದೇಶ್ವರರ ಶಿವನ ಶಕ್ತಿ ಒಂದು ಕಡೆ ಸೇರಲಿದೆ. ವಿಶೇಷವಾಗಿ 2025 ರಿಂದ 2032 ರ ಅವಧಿಯಲ್ಲಿ ಈ ಬದಲಾವಣೆಗಳು ಘಟಿಸಲಿವೆ. ಸಿದ್ದೇಶ್ವರ ಸಾನಿಧ್ಯ ತೆಗೆದಾಗ, ಇಲ್ಲಿ ಸೇರಿರುವ ಏಳು ಜನ ಅಕ್ಕ-ತಂಗಿಯರು ಸೇರಿ ‘‘ಘಟಪ್ರಭ ಪರಿವರ್ತನೆ’’ ಎಂಬ ದೊಡ್ಡ ಬದಲಾವಣೆ ಆಗಲಿದೆ ಎಂದರು.

ಇದನ್ನೂ ಓದಿ:Girish Mattannanavr: ಶಾಸಕರ ಭವನಕ್ಕೆ ಬಾಂಬ್ ಇಟ್ಟ ಪ್ರಕರಣ – ಗಿರೀಶ್ ಮಟ್ಟಣ್ಣನವರಿಗೆ ಮತ್ತೆ ಎದುರಾದ ಸಂಕಷ್ಟ

ಅಲ್ಲದೆ ‘ಈ ಜಗತ್ಪ್ರಸಿದ್ದ ಹಾಸನಾಂಬೆಯ ವೈಶಿಷ್ಟ್ಯತೆಯನ್ನು ಈ ಕೊನೆಯ ಅವಧಿಯಲ್ಲಿ ನಾವು ದರ್ಶನ ಮಾಡಿದೆವಲ್ಲ ಎಂದು ಸಂತೋಷ ಪಡುತ್ತೇವೆ. ಮುಂದಿನ ಅವಕಾಶಗಳು ನಮಗಲ್ಲ. ಯಾವ ಜನರಿಗೂ ಹಾಸನಾಂಬೆ ದರ್ಶನ ಆಗುವ ಅವಕಾಶಗಳು ಕಡಿಮೆ, ಅಡಚಣೆಗಳು ಎಷ್ಟು ಬರುತ್ತವೆ ಎಂಬುದನ್ನು ನೀವೇ ಮುಂದೆ ನೋಡುತ್ತೀರಿ’ ಎಂದು ಗುರೂಜಿ ಹೇಳಿದ್ದಾರೆ.

You may also like