ಭಾರತೀಯ ಜೀವ ವಿಮಾ ನಿಗಮ (LIC) ಎಲ್‌ಐಸಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ವಿಮಾ ಕಂಪನಿಗಳಲ್ಲಿ ಒಂದಾಗಿದೆ. ಪ್ರತಿ ಹಳ್ಳಿಗೂ ತನ್ನ ನೆಟ್ ವರ್ಕ್ ಅನ್ನು ವಿಸ್ತರಿಸಿದೆ. ಹಲವಾರು ವರ್ಷಗಳಿಂದ ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿರುವ ವಿಮಾ ವಲಯದಲ್ಲಿ ಎಲ್ ಐಸಿ ಇದು ಶಕ್ತಿ ಪಸರಿಸುವುದು ಖಚಿತ. ದೇಶಾದ್ಯಂತ 13 ಲಕ್ಷಕ್ಕೂ ಅಧಿಕ ಎಲ್‌ಐಸಿ ಏಜೆಂಟ್ ಗಳು ಇದ್ದಾರೆ. ಇದೀಗ ನಿಮಗೂ ಏಜೆಂಟ್ ಆಗಲು ಅವಕಾಶವಿದೆ. ಹೇಗೆ ಅಂತೀರಾ? ನೀವೇ ನೋಡಿ.
ಮೊದಲೆಲ್ಲಾ ಎಲ್‌ಐಸಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಿತ್ತು. ಅಥವಾ ಎಲ್‌ಐಸಿ ಅಭಿವೃದ್ಧಿ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಎಲ್‌ಐಸಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಎಲ್‌ಐಸಿ ಏಜೆಂಟ್ ಆಗಿರಿ!
ಎಲ್‌ಐಸಿ ಏಜೆಂಟ್ ಆಗುವುದಾದರೆ ನಿತ್ಯ ಇಷ್ಟು ಗಂಟೆ ಕೆಲಸ ಮಾಡಬೇಕು ಎಂಬ ನಿರ್ಬಂಧ ಇರುವುದಿಲ್ಲ. ನಿಮಗೆ ಬಿಡುವಿನ ವೇಳೆಯಲ್ಲಿ ನೀವು ಕೆಲಸ ಮಾಡಬಹುದು. ವಿದ್ಯಾರ್ಥಿಗಳು, ಗೃಹಿಣಿಯರು, ಅರೆಕಾಲಿಕ ಉದ್ಯೋಗಿಗಳು, ಆಕಾಂಕ್ಷಿಗಳು LIC ಏಜೆಂಟ್ ಆಗಬಹುದು. LIC ಏಜೆಂಟ್‌ಗಳು ಕಂಪನಿಯಿಂದ ಉಚಿತ ತರಬೇತಿಯನ್ನು ಪಡೆಯುತ್ತಾರೆ.
LIC ಏಜೆಂಟ್‌ಗೆ ಯಾವುದೇ ಸಂಬಳವಿಲ್ಲ. ಆದರೆ ನೀವು ಕಷ್ಟಪಟ್ಟು ಕೆಲಸ ಮಾಡಿದರೆ ನೀವು ಹೆಚ್ಚು ಗಳಿಸುತ್ತೀರಿ. ಎಲ್‌ಐಸಿಯಿಂದ ಹಲವು ಬಹುಮಾನಗಳೂ ಸಿಗಲಿವೆ. ಮಾರಾಟ ಪ್ರೋತ್ಸಾಹ ಲಭ್ಯವಿದೆ. ಪಾಲಿಸಿ ಮಾರಾಟವಾದಾಗ ಮೊದಲ ಕಮಿಷನ್ ಬರುತ್ತದೆ. ಪ್ರತಿ ವರ್ಷ ಪಾಲಿಸಿಯನ್ನು ನವೀಕರಿಸಿದರೆ, ನಿಮಗೂ ದುಡ್ಡು ಸಿಗುತ್ತದೆ. ಇವುಗಳಲ್ಲದೆ, ನೀವು ಬೋನಸ್ ಕಮಿಷನ್ ಮತ್ತು ಆನುವಂಶಿಕ ಕಮಿಷನ್ ಸಹ ಪಡೆಯಬಹುದು. ಎಲ್‌ಐಸಿ ಆಯೋಜಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಬಹುದು. ಗ್ರಾಚ್ಯುಟಿ, ಅವಧಿವಿಮೆ, ಗುಂಪು ವಿಮೆ, ವೈದ್ಯಕೀಯ ವಿಮೆ, ಪಿಂಚಣಿ ಯೋಜನೆ, ಗುಂಪು ವೈಯಕ್ತಿಕ ಅಪಘಾತ ಮತ್ತು ಅಂಗವೈಕಲ್ಯ ಯೋಜನೆಯಂತಹ ಪ್ರಯೋಜನಗಳು ಕೂಡ ಲಭ್ಯವಿದೆ.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲು ಪ್ರಾಯೋಜಕತ್ವ ಲಭ್ಯವಿದೆ. ಕಚೇರಿ ಭತ್ಯೆ ಕೂಡ ಲಭ್ಯವಿದೆ. ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ, ಲ್ಯಾಪ್‌ಟಾಪ್, ಕಂಪ್ಯೂಟರ್ ಖರೀದಿಸಲು ಮುಂಗಡ ಹಣ ತೆಗೆದುಕೊಳ್ಳಬಹುದು. ನೀವು ಹೌಸಿಂಗ್ ಲೋನ್ ತೆಗೆದುಕೊಂಡರೆ ಬಡ್ಡಿದರದಲ್ಲಿ ವಿನಾಯಿತಿ ಸಿಗುತ್ತದೆ. ಇಷ್ಟೆಲ್ಲಾ ಲಾಭವಿರುವ ಎಲ್‌ಐಸಿ ಏಜೆಂಟ್ ಗಳಾಗಿ ಯಾರು ಬೇಕಾದರೂ ಎಲ್‌ಐಸಿ ಏಜೆಂಟ್ ಆಗಬಹುದು!
ಆನ್ಲೈನ್ ನಲ್ಲಿ ಹೀಗೆ ಅರ್ಜಿ ಸಲ್ಲಿಸಿ:
ಮೊದಲು https://licindia.in/agent/index.html ತೆರೆಯಬೇಕು.
ನಂತರ ಅನ್ವಯಿಸು ಮೇಲೆ ಕ್ಲಿಕ್ ಮಾಡಿ, ಹೊಸ ಪುಟ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮ್ಮ ವಿವರಗಳನ್ನು ಕೇಳುತ್ತದೆ.ಹೆಸರು, ಹುಟ್ಟಿದ ದಿನಾಂಕ,ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ವಿಳಾಸವನ್ನು ನಮೂದಿಸಿ.
ಅದರ ನಂತರ ಫೋಟೋ, ವಯಸ್ಸಿನ ಪುರಾವೆ, ವಿಳಾಸ ಪುರಾವೆ, ಅರ್ಹತಾ ಪ್ರಮಾಣಪತ್ರಗಳನ್ನು ಅಪ್ಲೋಡ್ ಮಾಡಿ.
ಇನ್ಸೂರೆನ್ಸ್ ಏಜೆನ್ಸಿ ಪರೀಕ್ಷೆಯ ತರಬೇತಿಗಾಗಿ LIC ನಿಂದ ಮಾಹಿತಿಯನ್ನು ಪಡೆಯಲಾಗುತ್ತದೆ. ಇನ್ಸೂರೆನ್ಸ್ ಏಜೆನ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಸಾಕು. LIC ಏಜೆಂಟ್ ಆಗಿ ನೇಮಕಾತಿ ಪತ್ರ ಬರುತ್ತದೆ.
