Home » ATM: ವದ್ಧರಿಂದ ಎಟಿಎಂ ಹಣ ಎಗರಿಸುತ್ತಿದ್ದ ಮೂವರು ಅರೆಸ್ಟ್!

ATM: ವದ್ಧರಿಂದ ಎಟಿಎಂ ಹಣ ಎಗರಿಸುತ್ತಿದ್ದ ಮೂವರು ಅರೆಸ್ಟ್!

by ಕಾವ್ಯ ವಾಣಿ
0 comments

ATM: ಉತ್ತರ ಭಾರತ ಮೂಲದ ಮೂವರು ಯುವಕರು ಎಟಿಎಂಗಳಿಗೆ (ATM) ಬರುತ್ತಿದ್ದ ಅಮಾಯಕರ ವೃದ್ಧರನ್ನು ಯಾಮಾರಿಸುತ್ತಿದ್ದರು. ರಜೀಬ್, ಸುಭಾಂಸು ಮತ್ತು ನಯಾಜ್ ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಸುಲಭವಾಗಿ ದುಡ್ಡು ಮಾಡುವ ಪ್ಲಾನ್ ಮಾಡಿಕೊಂಡಿದ್ದರು.

 

ಹೌದು, ಮೂವರು ಫ್ರೆಜರ್ ಟೌನ್, ಶಿವಾಜಿನಗರ ಸುತ್ತಮುತ್ತಲ ನಿರ್ಜನ ಎಟಿಎಂಗೆ ಬರುತ್ತಿದ್ದ ವೃದ್ಧರನ್ನೇ ವಂಚಿಸುತ್ತಿದ್ದರು. ಎಟಿಎಂಗಳಿಗೆ ಬರುವ ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ, ಹಣ ವಿತ್​ಡ್ರಾ ಮಾಡಿಕೊಡುತ್ತೇವೆ ಎಂದು ಅಸಲಿ ಎಟಿಎಂ ಕಾರ್ಡ್ ಪಡೆದುಕೊಳ್ಳುತ್ತಿದ್ದರು. ನಂತರ ತಮ್ಮ ಬಳಿ ಇದ್ದ ನಕಲಿ ಕಾರ್ಡ್ ಮೆಷಿನ್ ಗೆ ಹಾಕಿ ಕಾರ್ಡ್ ಸರಿ ಇಲ್ಲ ಎನ್ನುತ್ತಿದ್ದರು. ವೃದ್ಧರು ಹೋದ ಬಳಿಕ ಎಟಿಎಂ ಪಿನ್ ಬಳಸಿ ಹಣ ಡ್ರಾ ಮಾಡುತ್ತಿದ್ದರು. ಅದೇ ರೀತಿ ಎಟಿಎಂನಲ್ಲಿ ಹಣ ಹೊರಬರುವ ಜಾಗವನ್ನು ಬ್ಲಾಕ್ ಮಾಡಿ ಹೊಂಚುಹಾಕುತ್ತಿದ್ದರು. ಹಣ ಡ್ರಾ ಮಾಡಿದವರಿಗೆ ಹಣ ಸಿಗದೆ ಅವರು ಅಲ್ಲಿಂದ ಹೋದ ಬಳಿಕ ಅ ಹಣ ಪಡೆಯುತ್ತಿದ್ದರು.

ಹೀಗೆ ವಂಚನೆಗೆ ಒಳಗಾದ ವೃದ್ದರೊಬ್ಬರು ಪುಲಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ, ಎಟಿಎಂ ಹಣ ಹಾಗೂ ಎಟಿಎಂಗೆ ಬರುವ ವೃದ್ಧರಿಂದ ಹಣ ಕಸಿಯುತ್ತಿದ್ದ ಈ ಆಸಾಮಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

You may also like