Home » Death: ಈಜಲು ಹೋದ ಮೂವರು ಮಕ್ಕಳು ನೀರುಪಾಲು!

Death: ಈಜಲು ಹೋದ ಮೂವರು ಮಕ್ಕಳು ನೀರುಪಾಲು!

0 comments

Death: ಕೊಳದಲ್ಲಿ ಈಜಲು ಹೋದ ಮೂವರು ಮಕ್ಕಳು ನೀರುಪಾಲಾಗಿರುವ ದುರಂತ ಘಟನೆ ತೆಲಂಗಾಣದ ನಾಗ ಕರ್ನುಲ್ ಜಿಲ್ಲೆಯ ಪೆದ್ದಕೋತಪಲ್ಲಿಯಲ್ಲಿ ನಡೆದಿದೆ.

ಪೋತಿನೇನಿ ಕೊಳದಲ್ಲಿ ಈಜಲು ಹೋದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತ ಮಕ್ಕಳನ್ನು ಗಣೇಶ್ ರೆಡ್ಡಿ (13), ರಕ್ಷಿತಾ (10) ಮತ್ತು ಶ್ರವಣ್ (7) ಎಂದು ಗುರುತಿಸಲಾಗಿದೆ. ಮೂವರು ಮಕ್ಕಳು ಒಂದೇ ಕುಟುಂಬದವರಾಗಿದ್ದು, ಮಕ್ಕಳನ್ನು ಕಳೆದುಕೊಂಡ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ನಿನ್ನೆ ಸಂಜೆ 4-5 ಗಂಟೆ ಸುಮಾರಿಗೆ ಆರು ಮಕ್ಕಳು ಕೊಳದ ಬಳಿ ಆಟವಾಡುತ್ತಿದ್ದಾಗ ಮೂವರು ಈಜುವ ಸಲುವಾಗಿ ಕೊಳಕ್ಕೆ ಇಳಿಸಿ
ದಿದ್ದಾರೆ. ಮಕ್ಕಳು ನೀರಲ್ಲಿ ಮುಳುಗಿದ ಬಳಿಕ ಸ್ಥಳೀಯರು ರಕ್ಷಣೆಗಗಾಗಿ ಧಾವಿಸಿದರೂ ಪ್ರಯತ್ನ ವಿಫಲವಾಗಿದೆ. ಬಳಿಕ ಮೂವರು ಮಕ್ಕಳ ಶವಗಳನ್ನು ಕೊಳದಿಂದ ಹೊರತೆಗೆಯಲಾಗಿದೆ.

You may also like