6
Suicide: ಪೊನ್ನಂಪೇಟೆ ತಾಲೂಕು ಕುಟ್ಟ ಸಮೀಪದ ಕೆ.ನಾಲಿಕ್ಕೇರಿ ಗ್ರಾಮದ ಬೆಟ್ಟ ಕುರುಬರ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಎತ್ನಿಸಿ, ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿದ ನಂತರ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೂವರನ್ನು ದಾಖಲಿಸಿದ್ದಾರೆ.
ಬೆಟ್ಟಕುರುಬರ ಸುದರ್ಶನ್, ಚೈತ್ರ, ಸುಶ್ಮಿತಾ ಎಂಬುವವರೇ ವಿಷ ಸೇವಿಸಿದವರಾಗಿದ್ದು, ಆತ್ಮಹತ್ಯೆಗೆ ಯತ್ನಿಸಿರುವ ಕಾರಣ ತಿಳಿದು ಬಂದಿಲ್ಲ. ಚೈತ್ರ ಮತ್ತು ಸುದರ್ಶನ್ ಮಾಯಮುಡಿ ಗ್ರಾಮದವರಾಗಿದ್ದಾರೆ. ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲೆ ಮಾಡಿಕೊಂಡು ಕ್ರಮ ಕೈಗೊಂಡಿದ್ದಾರೆ.
