Home » Death: ಲಾರಿ ಹರಿದು ಮೂರು ವರ್ಷದ ಬಾಲಕ ಸಾವು!

Death: ಲಾರಿ ಹರಿದು ಮೂರು ವರ್ಷದ ಬಾಲಕ ಸಾವು!

0 comments

Death: ರಸ್ತೆ ದಾಟುವಾಗ ಲಾರಿಯೊಂದು ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ (Death) ದಾರುಣ ಘಟನೆ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಶಿರಸಿಯ ಅತಾವುಲ್ಲಾ ಖಾನ್ ಹಾಗೂ ಫರೀನಾ ಬೇಗಂ ಅವರ ಪುತ್ರ ಮುಹಮ್ಮದ್ ಆಹಿಲ್ ಖಾನ್ (೩) ಮೃತ ಬಾಲಕ.

ಅಂಗನವಾಡಿಯಲ್ಲಿದ್ದ ಬಾಲಕ ಅಜ್ಜಿಯನ್ನು ಕಂಡು ರಸ್ತೆ ದಾಟುತ್ತಿರುವ ವೇಳೆ ಘಟನೆ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಬಾಲಕನ ಸಾವಿಗೆ ಕಾರಣ ಎಂದು ಮೃತ ಬಾಲಕನ ಅಜ್ಜಿ ನಸೀಮಾ ಬಾನು ನೀಡಿದ ದೂರಿನ ಹಿನ್ನಲೆಯಲ್ಲಿ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like