Home » Tiger Claw Pendant : ವ್ಯಾಪಾರಿಗಳು ಹುಲಿ ಉಗುರನ್ನು ಎಲ್ಲಿಂದ ತರ್ತಾರೆ ?! ಅದನ್ನು ಮಾರಾಟ ಮಾಡೋದು ಯಾರು ಗೊತ್ತಾ ?!

Tiger Claw Pendant : ವ್ಯಾಪಾರಿಗಳು ಹುಲಿ ಉಗುರನ್ನು ಎಲ್ಲಿಂದ ತರ್ತಾರೆ ?! ಅದನ್ನು ಮಾರಾಟ ಮಾಡೋದು ಯಾರು ಗೊತ್ತಾ ?!

0 comments
Tiger Claw Pendant

Tiger Claw Pendant : ಹುಲಿ ಉಗುರು ಪ್ರಕರಣದಲ್ಲಿ ವರ್ತೂರ್​​ ಸಂತೋಷ್​ ಬಂಧನವಾಗುತ್ತಿದ್ದಂತೆ, ಹುಲಿ ಉಗುರಿನ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಸ್ವಾಮೀಜಿ, ಸೆಲೆಬ್ರಿಟಿ, ರಾಜಕಾರಣಿಗಳು ಧರಿಸಿರುವ ಬಗ್ಗೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಷ್ಟಕ್ಕೂ ವ್ಯಾಪಾರಿಗಳು ಹುಲಿ ಉಗುರನ್ನು ಎಲ್ಲಿಂದ ತರ್ತಾರೆ ?! ಅದನ್ನು ಮಾರಾಟ ಮಾಡೋದು ಯಾರು ಗೊತ್ತಾ ?! ಇಲ್ಲಿದೆ ನೋಡಿ ಮಾಹಿತಿ!!!.

ಇದೀಗ ಹುಲಿ ಉಗುರಿನ ಪೆಂಡೆಂಟ್ (Tiger Claw Pendant) ಮಾಡಿಕೊಡುವ ಆಭರಣ ಅಂಗಡಿಗಳ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಇವರು ಗ್ರಾಹಕರಿಂದ ಆರ್ಡರ್ ಪಡೆದು ಹುಲಿ ಉಗುರು ಪೆಂಡೆಂಟ್ ಮಾಡಿಕೊಡುತ್ತಿದ್ದರು. ಆದರೆ ಇವರು ಎಲ್ಲಿಂದ ಹುಲಿ ಉಗುರು ತರುತ್ತಿದ್ದಾರೆ? ಯಾರು ಇವರಿಗೆ ಚಿನ್ನದ ಉಗುರು ಮಾರಾಟ ಮಾಡುತ್ತಿದ್ದಾರೆ ? ಎಂಬ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಜ್ಯುವೆಲರಿ ಶಾಪ್​ಗಳು ಮಾತ್ರವಲ್ಲ, ದೊಡ್ಡ ದೊಡ್ಡ ಶೋ ರೂಂ ಗಳ ಮೇಲೆ ದಾಳಿ ನಡೆಸಲು ಅರಣ್ಯಾಧಿಕಾರಿಗಳು ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅರಣ್ಯಾಧಿಕಾರಿಗಳು ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ, ರಾಕ್​ಲೈನ್ ವೆಂಕಟೇಶ್, ಜಗ್ಗೇಶ್ ಅವರ ಮನೆಗಳ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment