Home » Kiccha sudeep: ಪ್ರೆಸ್‌ಮೀಟ್ ಪ್ರಶ್ನೆಗೆ, ಮೋದಿ ಅಥವಾ ಸಿದ್ದರಾಮಯ್ಯ ಮನೆ ಮುಂದೆ ಸ್ಟ್ರೈಕ್ ಮಾಡಿ ಎಂದ ಕಿಚ್ಚ!

Kiccha sudeep: ಪ್ರೆಸ್‌ಮೀಟ್ ಪ್ರಶ್ನೆಗೆ, ಮೋದಿ ಅಥವಾ ಸಿದ್ದರಾಮಯ್ಯ ಮನೆ ಮುಂದೆ ಸ್ಟ್ರೈಕ್ ಮಾಡಿ ಎಂದ ಕಿಚ್ಚ!

0 comments

Kiccha sudeep: ನಟ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿರುವ ಕಿಚ್ಚ ಸುದೀಪ್ ನಿರೂಪಣೆ ಯಲ್ಲಿ ಮೂಡಿ ಬರಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು ಈ ಹಿನ್ನಲೆ ನಿನ್ನೆ ಸೆ. 23ರಂದು ಪ್ರೆಸ್‌ಮೀಟ್ ಕರೆದಿದ್ದರು. ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 11 ರ ಪ್ರೋಮೊ ದಲ್ಲಿ ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್‌ ಬಗ್ಗೆ ಅನೌನ್ಸ್ ಮಾಡಿದ್ದು, ಜನರಿಗೆ ಇನ್ನಷ್ಟು ಈ ಶೋ ಬಗ್ಗೆ ಕುತೂಹಲ ಹೆಚ್ಚಿದೆ.

ಆದ್ರೆ ಈ ಪ್ರೆಸ್‌ಮೀಟ್ ನಲ್ಲಿ ಪತ್ರ ಕರ್ತರೊಬ್ಬರು ಸುದೀಪ್ (Kiccha sudeep) ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ರಮ್ಮಿ ಜೊತೆ ಬ್ಯುಸಿಸೆನ್‌ ಪಾರ್ಟನರ್ ಆಗಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದು, ಈ ಪ್ರಶ್ನೆಗೆ ಬಿಗ್ ಬಾಸ್ ಮುಖ್ಯಸ್ಥರಾದ ಪ್ರಶಾಂತ್ ‘A23 rummy ಅವರು ನಮಗೆ ಕ್ಲೈಂಟ್ ಆಗಿರುತ್ತಾರೆ ಎನ್ನುವ ಗೊಂದಲದ ಉತ್ತರ ನೀಡುತ್ತಾರೆ.

ಇನ್ನು ಅದೇ ವೇದಿಕೆಯಲ್ಲಿದ್ದ ಬಿಬಿ ತಂಡದವರಲ್ಲಿ ಒಬ್ಬರಾದವರು ‘ರಮ್ಮಿ ಆಟವಾಡುವುದನ್ನು ನಮ್ಮ ರಾಜ್ಯದಲ್ಲಿ ಬ್ಯಾನ್ ಮಾಡಿಲ್ಲ ಆಟವಾಡಲು ಅನುಮತಿ ಇದೆ. ನಮ್ಮ ಭಾರತ ಸರ್ಕಾರ ಇದನ್ನು ತಡೆಯುವುದರ ಬಗ್ಗೆ ನಿರ್ಧಾರ ಮಾಡಬೇಕು ಎಂದಿದ್ದಾರೆ.

ಇನ್ನು ಈ ಬಗ್ಗೆ ಸುದೀಪ್ ರಿಯಾಕ್ಷನ್ ಮಾಡಿದ್ದು, ‘ಏನೆಂದರೆ ಹೆಚ್ಚು ತಿಳುವಳಿಕೆ ಇರುವಂತ ಸಮಾಜ ನಮ್ಮದ್ದು, ಬುದ್ಧಿವಂತಿಕೆ ಇರುವ ಸಮಾಜದಲ್ಲಿ ಸಿಗರೇಟ್ ಇದೆ ಕುಡಿತ ಇದೆ ಸಾಕಷ್ಟಿದೆ. ನಮಗೆ ಏನು ಬೇಕು ನಾವು ಆಯ್ಕೆ ಮಾಡಬೇಕು. ಇನ್ನು ದೇಶ ನಡೆಸುವುದಕ್ಕೆ ಸರ್ಕಾರ ಏನು ಮಾಡಬೇಕು ಅದನ್ನು ಮಾಡಲೇ ಬೇಕು. ಈ ರೀತಿ ದೊಡ್ಡ ಶೋ ನಡೆಸುವುದಕ್ಕೆ ಬಿಗ್ ಬಾಸ್‌ ತಂಡದವರು ಕೂಡ ಅವರ ಕೆಲಸ ಮಾಡಬೇಕು ಏಕೆಂದರೆ ಒಂದು ದೊಡ್ಡ ಶೋ ಮಾಡಲು ಅಷ್ಟೇ ಖರ್ಚು ಆಗುತ್ತದೆ. ಬಿಗ್ ಬಾಸ್ ಕಾರ್ಯಕ್ರಮದಿಂದ ಎಷ್ಟು ಮನೆಗಳು ಬೆಳೆಯಿತು ಎಷ್ಟು ವ್ಯಕ್ತಿತ್ವಗಳು ಉದ್ದಾರ ಆಯ್ತು ಎಷ್ಟು ಜನರಿಗೆ ಕೆಲಸ ಸಿಗ್ತು. ಇಲ್ಲಿ ಕೆಲಸ ಗಿಟ್ಟಿಸಿಕೊಂಡವರು A23 ರಮ್ಮಿಯನ್ನು ಆಯ್ಕೆ ಮಾಡಿಕೊಂಡ್ರಾ ಇಲ್ಲ ಏನು ಕೆಲಸ ಮಾಡಿದ್ದರು ಅದರಿಂದ ಏನು ಕಲಿತರು ಹೀಗೆ ನಾನು ದೊಡ್ಡದಾಗಿ ಯೋಚನೆ ಮಾಡಲು ಇಷ್ಟ ಪಡುತ್ತೀನಿ. ನನ್ನ ಪ್ರಕಾರ ಸಮಾಜದಲ್ಲಿ ಇರುವ ಪ್ರತಿಯೊಬ್ಬರು ತಿಳುವಳಿಕೆ ಇರುವವರು ಸರಿಯಾಗಿರುವು ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಹೀಗಾಗಿ ನಮಗೆ ಒಂದು ಕುಟುಂಬ, ಒಬ್ಬಳೆ ಹೆಂಡತಿ ಮತ್ತು ಒಬ್ಬರೆ ತಂದೆ ತಾಯಿ ಇದ್ದಾರೆ. ಆದರೆ ಈ ಕುರಿತು ನೀವು ಮೋದಿ ಅವರ ನಿವಾಸಕ್ಕೆ ಹೋಗಿ ಇಲ್ಲ ಸಿದ್ಧರಾಮಯ್ಯ ಅವರ ನಿವಾಸಕ್ಕೆ ಹೋಗಿ ಅಲ್ಲಿ ಸ್ಟ್ರೈಕ್ ಮಾಡಿ’ ಎಂದು ಸುದೀಪ್ ಸ್ವಲ್ಪ ಖಡಕ್ ಆಗಿ ಉತ್ತರಿಸಿದ್ದಾರೆ.

You may also like

Leave a Comment