Home » ಮನೆಯ ಟಾಯ್ಲೆಟ್ ನಲ್ಲಿ ಬುಸುಗುಟ್ಟಿದ ನಾಗಪ್ಪ !! | ನಾಗರ ಹಾವನ್ನು ಹಿಡಿದ ಬಳಿಕ ಆರತಿ ಬೆಳಗಿ, ಪೂಜೆ ಮಾಡಿದ ಮನೆಯೊಡತಿ

ಮನೆಯ ಟಾಯ್ಲೆಟ್ ನಲ್ಲಿ ಬುಸುಗುಟ್ಟಿದ ನಾಗಪ್ಪ !! | ನಾಗರ ಹಾವನ್ನು ಹಿಡಿದ ಬಳಿಕ ಆರತಿ ಬೆಳಗಿ, ಪೂಜೆ ಮಾಡಿದ ಮನೆಯೊಡತಿ

by ಹೊಸಕನ್ನಡ
0 comments

ಮನೆಯ ಸುತ್ತಮುತ್ತ ಎಲ್ಲಿಯಾದರೂ ನಾಗರಹಾವು ಕಂಡರೆ ಭಯ ಬೀಳುತ್ತೇವೆ. ಹಾಗಿರುವಾಗ ಮನೆಯೊಳಗೆ ನಾಗಪ್ಪ ಕಂಡರೆ ಮನೆಯವರ ಸ್ಥಿತಿ ಹೇಗಾಗಬೇಡ. ಹಾಗೆಯೇ ಇಲ್ಲಿ ಮನೆಯ ಟಾಯ್ಲೆಟ್‍ನಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿ, ಮನೆಯವರು ಭಯಭೀತರಾದ ಘಟನೆ ಶಿವಮೊಗ್ಗ ನಗರದ ಶಿವಪ್ಪನಾಯಕ ಬಡಾವಣೆಯಲ್ಲಿ ನಡೆದಿದೆ.

ಶಿವಪ್ಪನಾಯಕ ಬಡಾವಣೆ ನಿವಾಸಿ ಶಬರಿ ಅವರು ತಮ್ಮ ಮನೆಯ ಟಾಯ್ಲೆಟ್‍ಗೆ ಹೋದಾಗ, ಟಾಯ್ಲೆಟ್ ಪಿಟ್ ನಲ್ಲಿ ನಾಗರ ಹಾವು ಇರುವುದನ್ನು ಗಮನಿಸಿ ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ತಕ್ಷಣ ಸ್ನೇಕ್ ಕಿರಣ್‍ಗೆ ಫೋನ್ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್, ನಾಗರ ಹಾವನ್ನು ಸುರಕ್ಷಿತವಾಗಿ ಪಿಟ್‍ನಿಂದ ತೆಗೆದು ಹೊರಗೆ ತಂದಿದ್ದಾರೆ.

ಹಾವನ್ನು ಮನೆ ಹೊರಗೆ ತಂದ ಬಳಿಕ ಮನೆಯ ಒಡತಿ ನಾಗರ ಹಾವಿಗೆ ಆರತಿ ಬೆಳಗಿ, ಪೂಜೆ ಮಾಡಿದ್ದಾರೆ. ನಂತರ ಸ್ನೇಕ್ ಕಿರಣ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನಾಗಪ್ಪ ಮನೆಯಿಂದ ಹೊರ ಹೋದ ಬಳಿಕ ಶಬರಿ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

You may also like

Leave a Comment