Tomato Price Hike: ಕಳೆದ ವರ್ಷ 100 ರೂ ಗಡಿ ದಾಟಿ ಎಲ್ಲರಿಗೂ ಕೊಳ್ಳುವಾಗಲೇ ಕೈ ಸುಡುವಂತೆ ಮಾಡಿದ್ದ ‘ಕೆಂಪು ಸುಂದರಿ’ ಟಮೋಟೋ ದರ ಇದೀಗ ಮತ್ತೆ ದಿಢೀರ್ ಎಂದು ಏರಿಕೆ ಕಂಡಿದೆ.
ಹೌದು, ದೇಶದಾದ್ಯಂತ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಟೊಮ್ಯಾಟೊ ಬೆಲೆ ಭಾರೀ ಏರಿಕೆ ಕಂಡಿದೆ. ರಾಜ್ಯದಲ್ಲಿ ಕಳೆದ ವರ್ಷ ಟೊಮ್ಯಾಟೊ ಬೆಲೆ ಭಾರೀ ಏರಿಕೆ ಕಂಡಿತ್ತು. ಇದೀಗ ಮತ್ತೆ ಬೆಂಗಳೂರು ಸೇರಿದಂತೆ ವಿವಿಧ ಭಾಗದಲ್ಲಿ ಟೊಮ್ಯಾಟೊ ಬೆಲೆ ಮತ್ತೆ ಹೆಚ್ಚಳವಾಗಿದೆ.
ಕಳೆದ ಒಂದು ವಾರ ಹತ್ತು ದಿನಗಳಿಂದ ಸಾಧಾರಣ ಬೆಲೆ ಹೊಂದಿದ್ದ 15 ಕೆ.ಜೆ ಟೊಮ್ಯಾಟೊ ಇದೀಗ ಪ್ರತಿ ಬಾಕ್ಸ್‌ಗೆ ಬರೋಬ್ಬರಿ 700 ರೂಪಾಯಿಯಿಂದ 800 ರೂಪಾಯಿಗೆ ಹೆಚ್ಚಳವಾಗಿದೆ. ಇದೀಗ ರೈತರಿಗೆ ಟೊಮ್ಯಾಟೊ ಬೆಲೆ ಹೆಚ್ಚಳವು ಹೊಸ ಉತ್ಸಾಹವನ್ನು ಮೂಡಿಸಿದೆ..
ಟೊಮ್ಯಾಟೊ ಬೆಲೆ ಹೆಚ್ಚಳವಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆಯಾದರೂ.ಗ್ರಾಹಕರಿಗೆ ಇನ್ನಷ್ಟು ಬೆಲೆ ಹೆಚ್ಚಳವಾಗಲಿದೆಯೇ ಎನ್ನುವ ಆತಂಕ ಶುರುವಾಗಿದೆ. ಈಗಾಗಲೇ ಕೆಲವು ಭಾಗದಲ್ಲಿ ಪ್ರತಿ ಕೆ.ಜಿ ಟೊಮೊಟೊ ಬೆಲೆ 100 ರೂಪಾಯಿ ಗಡಿ ದಾಟಿದೆ.
ಇದನ್ನೂ ಓದಿ: BJP protest: ಯೂರಿಯಾ ಕೊರತೆ: ಸರ್ಕಾರದ ವೈಫಲ್ಯ ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ
