Home » Cobra – Tortoise fight: ಆಮೆ – ನಾಗರ ಹಾವಿನ ಕಾದಾಟ, ಗೆದ್ದವರು ಯಾರೆಂದು ನೀವೇ ನೋಡಿ !!

Cobra – Tortoise fight: ಆಮೆ – ನಾಗರ ಹಾವಿನ ಕಾದಾಟ, ಗೆದ್ದವರು ಯಾರೆಂದು ನೀವೇ ನೋಡಿ !!

0 comments
Cobra - Tortoise fight

Cobra – Tortoise fight: ಹಾವು-ಹಾವುಗಳು ಕಿತ್ತಾಡುವುದು ಸಾಮಾನ್ಯ. ಜೊತೆಗೆ ಅವು ಮುಂಗಸಿಗಳ ಜೊತೆ ಕಿತ್ತಾಡವದಂತೂ ಕಾಮನ್. ಅಲ್ಲದೆ ಅಪರೂಪಕ್ಕೆ ನಾಯಿ, ಹಕ್ಕಿ, ಕೋತಿ, ಕೋಳಿಗಳ ಕಾದಾಡುವುದೂ ಉಂಟು. ಇದನ್ನು ಹೆಚ್ಚಿನವರು ಕಣ್ಣಾರೆಯೋ ಇಲ್ಲ ವಿಡಿಯೋಗಳ ಮೂಲಕವೋ ನೋಡಿರುತ್ತಾರೆ. ಆದರೆ ಆಮೆ ಮತ್ತು ಹಾವು ಕಾದಾಡುವುದನ್ನು(Cobra – Tortoise fight) ಯಾರಾದರೂ ನೀಡಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ. ಇವೆರಡೂ ಕಾದಾಡೋ ವಿಡಿಯೋ ವೈರಲ್(Viral Video) ಆಗಿದ್ದು ಗೆಲ್ಲೋದು ಯಾರೆಂಬುದೇ ಕುತೂಹಲವಾಗಿದೆ.

Belthangady: ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ ಸಾವು

ಹೌದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು ಇದರಲ್ಲಿ ಹಾವು ಮತ್ತು ಆಮೆಯ ಯುದ್ಧ ನೋಡಬಹುದು. ವೀಡಿಯೋದಲ್ಲಿ ನಾಗರ ಹಾವು ಸುರುಳಿ ಸುತ್ತಿ ಹೆಡೆ ಎತ್ತಿರುವುದು ಕಂಡು ಬಂದಿದೆ. ಅದರ ಎದುರು, ಒಂದು ಸಣ್ಣ ಆಮೆ ಹಾವಿನ ಕಡೆಗೆ ಹೋಗುತ್ತದೆ. ಹಾವು ಆಮೆ ಮೇಲೆ ದಾಳಿ ಮಾಡುತ್ತದೆ. ಹೆದರಿದ ನಾಗರಹಾವು ಆಮೆಯನ್ನು ಕಚ್ಚಲು ಪ್ರಯತ್ನಿಸುತ್ತದೆ. ಆದರೆ ಆಮೆಯನ್ನು ಕಚ್ಚುವುದು ಅಷ್ಟು ಸುಲಭವಲ್ಲ ಎಂಬುದು ನಾಗರಹಾವಿಗೆ ಗೊತ್ತಿಲ್ಲ ಅನಿಸುತ್ತದೆ.

School Holiday Today: ಇಂದು ರಾಜ್ಯದ ಈ ತಾಲೂಕುಗಳ ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

ಇನ್ನು ನಾಗರಹಾವು ಎರಡನೇ ಬಾರಿ ಆಮೆಯನ್ನು ಕಚ್ಚಲು ಯತ್ನಿಸಿತು. ನಂತರ ನೀವು ನಾಗರಹಾವಿನ ಸ್ಥಿತಿಯನ್ನು ನೋಡಬೇಕು. ಯಾಕೆಂದರೆ ಯಾವುದೋ ಕಲ್ಲುಬಂಡೆಗೆ ತಾನು ಮುತ್ತಿಕ್ಕಿದಂತೆ ಅದಕ್ಕೆ ಬಾಸವಾಗಿರಬೇಕು. ಅದರಲ್ಲೂ ವಿಡಿಯೋದಲ್ಲಿ ಆಮೆ ಧೈರ್ಯದಿಂದ ನಿರ್ಭಯವಾಗಿ, ಏನೋ ನಿಂದು ಹಾ…. ಅನ್ನೋ ರೀತಿಯಲ್ಲಿ ನಾಗರಹಾವಿನ ಬಳಿಗೆ ಬಂದು ಸವಾಲು ಹಾಕೋದನ್ನು ಕಾಣಬಹುದು.

ಸದ್ಯ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ 29 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ. 4 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ. ನೆಟ್ಟಿಗರಂತೂ ತರಹೇವಾರಿ ಕಮೆಂಟ್ ಮಾಡಿದ್ದಾರೆ.

https://www.instagram.com/reel/C8gTrB9yFSB/?igsh=MWx6cGQxYWdkMHF5bA==

 

You may also like

Leave a Comment