Home » Temporary Wives: ಈ ಸ್ಥಳದಲ್ಲಿ ಪ್ರವಾಸಿಗರ ಕಾಮದಾಸೆ ಪಕ್ಕಾ ಈಡೇರುತ್ತೆ! ಅದಕ್ಕಾಗಿಯೇ ತಾತ್ಕಾಲಿಕ ಪತ್ನಿ ಸಿಗ್ತಾಳೆ!

Temporary Wives: ಈ ಸ್ಥಳದಲ್ಲಿ ಪ್ರವಾಸಿಗರ ಕಾಮದಾಸೆ ಪಕ್ಕಾ ಈಡೇರುತ್ತೆ! ಅದಕ್ಕಾಗಿಯೇ ತಾತ್ಕಾಲಿಕ ಪತ್ನಿ ಸಿಗ್ತಾಳೆ!

0 comments

Temporary Wives: ನಿಮಗಿದು ಗೊತ್ತಾ? ಇಲ್ಲಿ ಪ್ರವಾಸಿಗರ ಕಾಮದಾಸೆ ಪಕ್ಕಾ ಈಡೇರುತ್ತೆ ಮತ್ತು ಅದಕ್ಕಾಗಿಯೇ ತಾತ್ಕಾಲಿಕ ಪತ್ನಿ ಸಿಗ್ತಾಳೆ ಅನ್ನೋದು ಈ ಪ್ರವಾಸಿ ತಾಣದ ವಿಶೇಷ. ಹೌದು, ಕೆಲವು ದೇಶಗಳ ಪದ್ಧತಿ ತುಂಬಾ ವಿಚಿತ್ರವಾಗಿರುತ್ತದೆ. ಅದಕ್ಕೆ ಉದಾಹರಣೆ ಇಂಡೋನೇಷ್ಯಾದ ( Temporary Wives ) ಈ ವಿಚಿತ್ರ ಪದ್ಧತಿ.

ಇಲ್ಲಿ ಮದುವೆಯ ಹೆಸರಿನಲ್ಲಿ ಯುವತಿಯರನ್ನು ಲೈಂಗಿಕ ಟೂರಿಸಂಗೆ ಬಳಸಿಕೊಳ್ಳುವ ನೀತಿ ಇಂಡೋನೇಷ್ಯಾದ ಹಳ್ಳಿಗಳಲ್ಲಿ ವ್ಯಾಪಕವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಂತಾರಾಷ್ಟ್ರೀಯ ವರದಿಗಳ ಪ್ರಕಾರ,, ಬಡ ಯುವತಿಯರನ್ನು ತಾತ್ಕಾಲಿಕ ವಿವಾಹವಾಗುವ ಪ್ರವೃತ್ತಿ ಇಂಡೋನೇಷ್ಯಾದಲ್ಲಿ ಹೆಚ್ಚುತ್ತಿದೆ. ಮುಖ್ಯವಾಗಿ ಅವರಿಗೆ ವರದಕ್ಷಿಣೆಯಾಗಿ ಹಣ ಸಹ ನೀಡಲಾಗುತ್ತೆದೆ. ಹಣದ ಆಮಿಷ ತೋರಿಸಿ ಈ ತಾತ್ಕಾಲಿಕ ವಿವಾಹಗಳನ್ನು ಮಾಡಿಕೊಳ್ಳಲು ಒತ್ತಾಯಿಸಲಾಗುತ್ತದೆ. ಇಂಡೋನೇಷ್ಯಾದ ಪಶ್ಚಿಮ ಪ್ರದೇಶದ ಪನ್ಕಾಕ್​ನಲ್ಲಿ ಇಂದಿಗೂ ಈ ಅಭ್ಯಾಸವು ಸಕ್ರಿಯವಾಗಿದೆ ಎಂದು ವರದಿಗಳು ಹೇಳಿವೆ. ಇದನ್ನು ಸಂತೋಷದ ಮದುವೆಗಳು ( pleasure marriages ) ಎಂದು ಕರೆಯಲಾಗುತ್ತದೆ.

ಸಂತೋಷದ ಮದುವೆಯ ನಂತರ ಯುವತಿಯರು ತಮ್ಮನ್ನು ಮದುವೆಯಾದ ಪ್ರವಾಸಿಯೊಂದಿಗೆ ವಾಸಿಸಬೇಕು. ಈ ಸಮಯದಲ್ಲಿ ಆಕೆ ಲೈಂಗಿಕ ಆನಂದ ಮತ್ತು ಮನೆಕೆಲಸಗಳಿಗೆ ಜವಾಬ್ದಾರಳಾಗಿರುತ್ತಾಳೆ. ಅಂತಿಮವಾಗಿ ಪತಿ ದೇಶವನ್ನು ತೊರೆದಾಗ ಮದುವೆಯನ್ನು ವಿಸರ್ಜಿಸಲಾಗುತ್ತದೆ.

ಕಹಾಯಾ ಎಂಬ ಮಹಿಳೆಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಇವರು 15ಕ್ಕೂ ಹೆಚ್ಚು ಬಾರಿ ಮದುವೆಯಾಗಿದ್ದಾರೆ. ಆಕೆಯ ಎಲ್ಲ ‘ಗಂಡಂದಿರು’ ಮಧ್ಯಪ್ರಾಚ್ಯದಿಂದ ಬಂದ ಪ್ರವಾಸಿಗರು ಎಂದು ತಿಳಿಸಿದ್ದಾರೆ.

ಇಂತಹ ವ್ಯವಸ್ಥೆಗಳನ್ನು ನಿಕಾಹ್ ಮುತಾಹ್ ಅಥವಾ ಸಂತೋಷದ ಮದುವೆಗಳು ಎಂದು ಕರೆಯಲಾಗುತ್ತದೆ ಮತ್ತು ಶಿಯಾ ಇಸ್ಲಾಂ ಸಂಸ್ಕೃತಿಯ ಭಾಗವೆಂದು ಹೇಳಲಾಗುತ್ತದೆ. ಈ ಸಂತೋಷದ ಮದುವೆಗಳನ್ನು ಇಂಡೋನೇಷಿಯನ್ ಕಾನೂನಿನಿಂದ ಮಾನ್ಯತೆ ಪಡೆದಿಲ್ಲ. ಈ ಮದುವೆಯ ಮೂಲ ಉದ್ದೇಶವನ್ನು ವಿರೋಧಿಸಲಾಗುತ್ತದೆ. ವರದಿಗಳ ಪ್ರಕಾರ, ತಾತ್ಕಾಲಿಕ ವಿವಾಹಗಳು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕತೆಯನ್ನು ಹೆಚ್ಚಿಸಿದೆ ಮತ್ತು ಪ್ರಮುಖ ಉದ್ಯಮವಾಗಿ ಮಾರ್ಪಟ್ಟಿದೆ. ಅದಕ್ಕಾಗಿಯೇ ಅಲ್ಲಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

You may also like

Leave a Comment