Bengaluru: ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿಯನ್ನು ಸರ್ಕಾರ ನೀಡಿದ್ದು, ಯಾವ ಬಸ್ ಎಲ್ಲಿದೆ? ಎಷ್ಟು ಸೀಟುಗಳು ಖಾಲಿ ಇವೆ? ಎಂದು ಇನ್ಮೇಲೆ ತಮ್ಮ ಮೊಬೈಲ್ ನಲ್ಲಿ ಒಂದು ಆಪ್ ಇನ್ಸ್ಟಾಲ್ ಮಾಡುವ ಮೂಲಕ ತಿಳಿದುಕೊಳ್ಳಬಹುದು. ಅಂಬಾರಿ, ಪಲ್ಲಕ್ಕಿ, ರಾಜಹಂಸ ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುವ ಬಸ್ ಗಳ ಬಗ್ಗೆ ತಿಳಿಯಬಹುದಾಗಿದೆ.
ಬಸ್ ಗಳನ್ನು ಟ್ರ್ಯಾಕ್ ಮಾಡಲು ರಾಜ್ಯ ಕೆಎಸ್ಆರ್ಟಿಸಿ ಯು ‘ವೇಹಿಕಲ್ ಟ್ರಾಕಿಂಗ್ ಅಂಡ್ ಮಾನಿಟರಿಂಗ್ ಸಿಸ್ಟಂ’ (VTMS) ಎಂಬ ಆಪ್ ಅನ್ನು ಪರಿಚಯಿಸಲು ಮುಂದಾಗಿದ್ದು, ಟೆಂಡರ್ ಕರಿದಿದೆ. ಅಂದುಕೊಂಡಂತೆ ಕೆಲಸವಾದರೆ ಮುಂದಿನ 4-5 ತಿಂಗಳಲ್ಲಿ ಹೊಸ ಆಪ್ ನಮ್ಮ ಕೈಗೆ ಸಿಗುತ್ತದೆ. ಕೇಂದ್ರ ರೈಲ್ವೆ ಸಚಿವಾಲಯದ ಮಾದರಿಯಲ್ಲಿ ಆಪ್ ಬಗ್ಗೆ ಚಿಂತನೆ ನಡೆಸಿದ್ದು, ಮುಂದಿನ ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಸಿದ್ಧವಾಗಲಿದೆ. ಇದರ ಮೂಲಕ ಇಂಧನ ಕ್ಷಮತೆ ಹಾಗೂ ಅಪಘಾತಗಳನ್ನು ತಪ್ಪಿಸಲು ಕಾಲ ಕಾಲಕ್ಕೆ ಚಾಲಕರಿಗೆ ಎಚ್ಚರಿಕೆಗಳನ್ನು ರವಾನೆ ಮಾಡುವಂತೆ ಆಪ್ ಅನ್ನು ವಿನ್ಯಾಸಗೊಳಿಸಲಾಗುತ್ತದೆ. ಹಾಗೂ ಪ್ರಯಾಣಿಕರು ಬಸ್ಸಿನ ನೋಂದಣಿ ಸಂಖ್ಯೆಯನ್ನು ನೋಂದಾಯಿಸಿದರೆ ಪೂರ್ಣ ಮಾಹಿತಿನ್ನು ಪಡೆಯಬಹುದಾಗಿದೆ.
ಒಟ್ಟಾರೆಯಾಗಿ ಮುಂಗಡ ಟಿಕೆಟ್ ಬುಕ್ಕಿಂಗ್ ಸೇವೆ ಇರುವ ಹಾಗೂ ಇಲ್ಲದಿರುವ 8,800 ಬಸ್ ಗಳಲ್ಲಿ ಈ ಸೌಲಭ್ಯವನ್ನು ಅಳವಡಿಸಲಾಗುತ್ತದೆ ಮತ್ತು ಇದು ನಗರ ಹಾಗೂ ಗ್ರಾಮೀಣ ಎರಡೂ ಕಡೆ ಸಂಚಾರ ಮಾಡುತ್ತವೆ. ಹಾಗೂ 1,400 ಹೊಸ ಬಸ್ ಗಳಲ್ಲಿ ಈಗಾಗಲೇ ಈ ಸೌಲಭ್ಯ ಇದ್ದು, ಆಪ್ ಗೆ ಜೋಡಿಸಬೇಕಾಗಿದೆ.
