Home » Bengaluru : ಜೈಲಿನಿಂದ ಬಂದು ಪ್ರಮೋಷನ್ ಪಡೆದ ಟ್ರ್ಯಾಕ್ಟರ್ ಕಳ್ಳರು – ಬೆಂಗಳೂರಲ್ಲಿ ಕಾರುಗಳನ್ನು ಕದ್ದು ಹಳ್ಳಿಗಳಲ್ಲಿ ಮಾರಾಟ!!

Bengaluru : ಜೈಲಿನಿಂದ ಬಂದು ಪ್ರಮೋಷನ್ ಪಡೆದ ಟ್ರ್ಯಾಕ್ಟರ್ ಕಳ್ಳರು – ಬೆಂಗಳೂರಲ್ಲಿ ಕಾರುಗಳನ್ನು ಕದ್ದು ಹಳ್ಳಿಗಳಲ್ಲಿ ಮಾರಾಟ!!

by V R
0 comments

Bengaluru : ಬೆಂಗಳೂರಲ್ಲಿ ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

ಉಮೇಶ್, ತಬ್ರೇಜ್, ಜಬೀರ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ 12 ಲಕ್ಷ ಮೌಲ್ಯದ ಆರು ಓಮ್ನಿ ಕಾರುಗಳನ್ನು ಸೀಜ್ ಮಾಡಲಾಗಿದೆ.

 

ಅಂದಹಾಗೆ ಬಂಧಿತ ಖದೀಮರ ಗ್ಯಾಂಗ್, ಹಿಂದೆ ಟ್ರಾಕ್ಟರ್ ಗಳನ್ನ ಕದ್ದೊಯ್ತಿದ್ದರು. ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ 2020 ರಲ್ಲಿ ಟ್ರಾಕ್ಟರ್ ಕಳ್ಳತನ ಕೇಸ್ ನಲ್ಲಿ ಬಂಧಿತರಾಗಿದ್ರು‌. ಟ್ರಾಕ್ಟರ್ ಕಳ್ಳತನ ಕೇಸ್ ನಲ್ಲಿ ಜೈಲು ಸೇರಿ ಹೊರಬಂದ್ಮೇಲೆ ಓಮ್ನಿ ಕಾರು ಕಳ್ಳತನ ಶುರು ಮಾಡಿದ್ದಾರೆ. ಬೆಂಗಳೂರಿನಲ್ಲಿ ಕದ್ದ ಓಮ್ನಿ ಕಾರುಗಳನ್ನ ಹಳ್ಳಿಗಳಲ್ಲಿ ಮಾರಾಟ ಮಾಡ್ತಿದ್ರು. ಕಳೆದ ಮೇ ತಿಂಗಳಿನಲ್ಲಿ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಓಮ್ನಿ ಕಾರು ಕದ್ದೊಯ್ದಿದ್ದರು. ಆರೋಪಿಗಳ ಕಾರು ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

 

ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರ ಬಳಿ 12 ಮೌಲ್ಯದ ಓಮ್ನಿ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.

You may also like